ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಗಂಟೆಗಳ ನಂತರ ಬಿಜೆಪಿ ಶಾಸಕನಿಗೆ ಕೊರೋನ ಸೋಂಕು ದೃಢ

ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಗಂಟೆಗಳ ನಂತರ ಹಿರಿಯ ಬಿಜೆಪಿ ಶಾಸಕರೊಬ್ಬರು ಕೊರೋನ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಆಗಮಿಸಿದ್ದ ಇತರ ಶಾಸಕರು ಮತ್ತು ವಿಧಾನಸಭೆಯ ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ. ಇದೀಗ ಹಲವು ಶಾಸಕರು ಆಸ್ಪತ್ರೆಗಳಿಗೆ ತೆರಳಿ ಕೊರೋನ ಪರೀಕ್ಷೆ ನಡೆಸಿದ್ದಾರೆ.
ತಮ್ಮ ಪತ್ನಿ ಅನಾರೋಗ್ಯಕ್ಕೊಳಗಾದ ನಂತರ ಶಾಸಕ ಶುಕ್ರವಾರ ಕೊರೋನ ಪರೀಕ್ಷೆಗೊಳಗಾಗಿದ್ದರು. ಸಂಜೆ ಅವರಿಬ್ಬರೂ ಕೊರೋನ ಸೋಂಕು ಪೀಡಿತರಾಗಿರುವುದು ತಿಳಿದು ಬಂದಿತ್ತು.
Next Story





