ಚೀನಿ ಆ್ಯಪ್‌ಗಳ ನಿರ್ಬಂಧಕ್ಕೆ ಆದೇಶ ಹೊರಡಿಸಿಲ್ಲ: ಕೇಂದ್ರ ಸರಕಾರ

ಹೊಸದಿಲ್ಲಿ,ಜೂ.20: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಇನ್‌ಫಾರ್ಮೇಟಿಕ್ಸ್ ಸೆಂಟರ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿಯ ಟಿಕ್‌ಟಾಕ್, ವಿಮೇಟ್, ವಿಗೋ ವೀಡಿಯೊ ಸೇರಿದಂತೆ ಕೆಲವು ಚೀನಿ ಆ್ಯಪ್‌ಗಳನ್ನು ತಕ್ಷಣದಿಂದಲೇ ನಿರ್ಬಂಧಿಸುವಂತೆ ಈ ಕಂಪನಿಗಳಿಗೆ ಆದೇಶಿಸಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದೊಂದು ನಕಲಿ ಸಂದೇಶವಾಗಿದೆ ಮತ್ತು ಗೂಗಲ್ ಅಥವಾ ಆ್ಯಪಲ್‌ಗೆ ಇಂತಹ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ಎಂದು ಸರಕಾರವು ಸ್ಪಷ್ಟಪಡಿಸಿದೆ.
ಪಿಐಬಿ ಫ್ಯಾಕ್ಟ್‌ಚೆಕ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಇದು ನಕಲಿ ಸಂದೇಶವಾಗಿದೆ ಎನ್ನುವುದನ್ನು ದೃಢಪಡಿಸಿದೆ.
Next Story





