ಬೆಂಗಳೂರು: ಗುರು ರಾಘವೇಂದ್ರ ಬ್ಯಾಂಕ್‍ನಲ್ಲಿ 1 ಲಕ್ಷದವರೆಗೆ ಹಣ ವಿತ್‍ಡ್ರಾ ಮಾಡಲು ಅವಕಾಶ
ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ

ಬೆಂಗಳೂರು, ಜೂ.20: ಬಸವನಗುಡಿಯ ಶ್ರೀಗುರು ರಾಘವೇಂದ್ರ ಬ್ಯಾಂಕ್ ನಿಯಮಿತದಲ್ಲಿ ಗ್ರಾಹಕರಿಗೆ ಹಾಗೂ ಠೇವಣಿದಾರರಿಗೆ 1 ಲಕ್ಷದವರೆಗೆ ಹಣ ಪಡೆಯಲು ಅವಕಾಶ ಮಾಡಿಕೊಟ್ಟಿದ್ದು, ಹಣದ ಅಗತ್ಯ ಇರುವವರು ಬ್ಯಾಂಕಿಗೆ ಬಂದು ತೆಗೆದುಕೊಂಡು ಹೋಗಬಹುದು ಎಂದು ಗುರುರಾಘವೇಂದ್ರ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಗರಣದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‍ನ ಮೇಲೆ ಇತ್ತೀಚೆಗೆ ಎಸಿಬಿ ದಾಳಿ ನಡೆಸಿತ್ತು. ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿತ್‍ಡ್ರಾ ಮೊತ್ತ ಹೆಚ್ಚಿಸುವಂತೆ ಗ್ರಾಹಕರು ಬೇಡಿಕೆ ಇಟ್ಟಿದ್ದರು. ಹೀಗಾಗಿ, ಆರ್‍ಬಿಐ ಅಧಿಕಾರಿಗಳೊಂದಿಗೆ ಬ್ಯಾಂಕ್ ಆಡಳಿತ ಮಂಡಳಿ ಚರ್ಚೆ ನಡೆಸಿತ್ತು.
ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಿರುವ ಬ್ಯಾಂಕ್ ವಿತ್‍ಡ್ರಾ ಮೊತ್ತವನ್ನು 30 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ಬಸವನಗುಡಿಯಲ್ಲಿ ಇರುವ ಕೇಂದ್ರ ಕಚೇರಿ ಮುಂದೆ ಸಾಲು ಗಟ್ಟಿ ನಿಂತಿದ್ದಾರೆ. ಇನ್ನು ಮೊದಲ ಹಂತದಲ್ಲಿ ಶೇ.50ರಷ್ಟು ಗ್ರಾಹಕರಿಗೆ ಮಾತ್ರ ಹಣ ಪಡೆಯಲು ಅವಕಾಶ ನೀಡಲಾಗಿದೆ.







