ಉಡುಪಿ: ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್ ಸೌಲಭ್ಯ
ಉಡುಪಿ, ಜೂ.20: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರಕಾರ ಮಾ.23ರಿಂದ ಲಾಕ್ಡೌನ್ ಘೋಷಿಸಿರು ವುದರಿಂದ ಈ ಅವಧಿಯಲ್ಲಿ ನಿಗಮದ ವಾಹನಗಳ ಸಂಚಾರವನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿತ್ತು.
ಪ್ರಸ್ತುತ ಕೋವಿಡ್-19 ಲಾಕ್ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಪರಿಸ್ಥಿತಿ ಯನ್ನು ಗಮನದಲ್ಲಿರಿಸಿಕೊಂಡು ನಿಗಮದ ಸಾರಿಗೆ ಸೇವೆಗಳ ಕಾರ್ಯಾಚರಣೆಯಲ್ಲಿ ಸಹ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಮೇ 19ರಿಂದ ಅವಶ್ಯಕತೆ ಗನುಸಾರ ಸಾರಿಗೆಗಳ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ನಿಗಮದ ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಪ್ರತಿ ನಿತ್ಯ ಪ್ರಯಾಣಿ ಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್ ಸೌಲಭ್ಯವನ್ನು ಮತ್ತೆ ಪ್ರಾರಂಭಿಸಲಾಗಿದೆ. ಮಂಗಳೂರು/ಸ್ಪೇಟ್ಬ್ಯಾಂಕ್-ಉಡುಪಿ, ಉಡುಪಿ-ಕುಂದಾಪುರ ಮಾರ್ಗಗಳಲ್ಲಿ ಈ ಮಾಸಿಕ ಪಾಸುಗಳನ್ನು ಜೂನ್ 20 ರಿಂದ ವಿತರಿಸಲಾಗುತ್ತಿದೆ.
ಆದುದರಿಂದ ಈ ಪಾಸು ಸೌಲಭ್ಯಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್: ಉಡುಪಿ ಬಸ್ ನಿಲ್ದಾಣ: 9663266400, ಕುಂದಾಪುರ ಬಸ್ಸು ನಿಲ್ದಾಣ: 9663266009, ಮಂಗಳೂರು ಬಸ್ನಿಲ್ದಾಣ: 7760990720, ಸ್ಪೇಟ್ಬ್ಯಾಂಕ್ ಬಸ್ಸು ನಿಲ್ದಾಣ: 9663266001 ಸಂಪರ್ಕಿಸಬಹುದು ಎಂದು ಕರಾರಸಾಸಂ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.