ಮೈಸೂರು: ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ಮೈಸೂರು,ಜೂ. 20: ಮೈಸೂರಿನಲ್ಲಿ ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟ ಬೋನಿಗೆ ಬಿದ್ದು, ಜಂತಕಳ್ಳಿಯ ತೋಟದ ಮನೆಯಲ್ಲಿ ಸೆರೆಯಾಗಿದೆ.
ಡಾ.ಮಧುಸೂದನ್ ಎಂಬವರ ತೋಟದಲ್ಲಿ ಅರಣ್ಯ ಇಲಾಖೆ ಧಿಕಾರಿಗಳು ಬೋನನ್ನು ಇರಿಸಿದ್ದರು. ಹಲವು ದಿನಗಳಿಂದ ನಾಯಿಗಳ ಮೇಲೆರಗಿ ಉಪಟಳ ನೀಡಿತ್ತಿತ್ತು. ಇದೀಗ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದ್ದು, ಸ್ಥಳೀಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಯಾದ ಚಿರತೆಯನ್ನು ಕಾಡಿಗೆ ರವಾನಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Next Story





