ಶ್ರೀನಗರ: ಮನೆಯೊಳಗೆ ಅವಿತಿದ್ದ ಮೂವರು ಉಗ್ರರ ಹತ್ಯೆ

ಹೊಸದಿಲ್ಲಿ, ಜೂ.21: ಶ್ರೀನಗರದ ಝದಿಬಾಲ್ ಸೌರಾ ಪ್ರದೇಶದಲ್ಲಿ ಭದ್ರತ ಪಡೆಗಳು ಮೂವರು ಉಗ್ರಗಾಮಿಗಳನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರರು ಸೌರಾ ಪ್ರದೇಶದ ಮನೆಯೊಂದರಲ್ಲಿ ಅಡಗಿ ಕುಳಿತ್ತಿದ್ದರು. ಭದ್ರತಾ ಪಡೆಗಳು ನೀಡಿದ್ದ ಶರಣಾಗತಿಯ ಅವಕಾಶವನ್ನು ಉಗ್ರರು ತಿರಸ್ಕರಿಸಿದ್ದರು. ಇಬ್ಬರು ಉಗ್ರರು 2019ರಿಂದ ಸಕ್ರಿಯರಾಗಿದ್ದರು. ಓರ್ವ ಕಳೆದ ತಿಂಗಳು ಇಬ್ಬರು ಯೋಧರ ಮೇಲೆ ದಾಳಿ ನಡೆಸಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಬಳಿಕ ಭದ್ರತಾ ಪಡೆಗಳು ಇಂದು ಬೆಳಗ್ಗೆ ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು.
Next Story





