ಬಜಾಲ್: ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ
ಬಜಾಲ್: ಎಸ್ ಡಿಪಿಐ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಬಜಾಲ್ ಎಸ್ ಡಿಪಿಐ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಎಸ್ ಡಿಪಿಐ ವಾರ್ಡ್ ಅಧ್ಯಕ್ಷರಾದ ಶೆರೀಫ್ ಪಕ್ಕಲಡ್ಕ ನೆರವೇರಿಸಿದರು. ಝುಲ್ಫಿಕರ್ ಕಣ್ಣೂರ್ ಮತ್ತು ಎಸ್ ಡಿಪಿಐ ಬಾಜಲ್ ವಾರ್ಡ್ ಉಪಾಧ್ಯಕ್ಷರಾದ ಕಬೀರ್ ಬಜಾಲ್ ಮಾತನಾಡಿದರು.
ಈ ಸಂದರ್ಭ ಕಾರ್ಯದರ್ಶಿ ಸತ್ತಾರ್ ಬಜಾಲ್, ಜೊತೆ ಕಾರ್ಯದರ್ಶಿ ಬಷೀರ್ ಪಕ್ಕಲಡ್ಕ ಉಪಸ್ಥಿತರಿದ್ದರು.
ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರು ಬಜಾಲ್ ಕುಂಬ್ಲಲಿಕೆಯಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಿದರು.