ಸೂರ್ಯ ಗ್ರಹಣ: ಊಟ ಮಾಡುವ ಮೂಲಕ ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ಜಾಗೃತಿ

ಬೆಂಗಳೂರು, ಜೂ.21: ನೈಸರ್ಗಿಕವಾಗಿ ಆಗುವಂತಹ ಸೂರ್ಯ ಗ್ರಹಣದ ಕುರಿತು ಯುವ ಪೀಳಿಗೆಗೆ ಮತ್ತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ದೃಷ್ಟಿಕೋನದಿಂದ ಮೂಢನಂಬಿಕೆ ವಿರೋಧಿ ಒಕ್ಕೂಟದ ಮುಖಂಡರು ಕಂಕಣ ಸೂರ್ಯ ಗ್ರಹಣದ ದಿನವೇ ಮೌರ್ಯ ಸರ್ಕಲ್ ಬಳಿ ಊಟ ಮಾಡುವ ಮೂಲಕ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಚಿಂತಕ ಬಿ.ಗೋಪಾಲ್ ಅವರು, ಸೂರ್ಯ ಗ್ರಹಣ ನೈಸರ್ಗಿಕವಾಗಿ ಬರುವಂತಹದ್ದು, ಗ್ರಹಣದ ಬಗ್ಗೆ ತಪ್ಪು ತಿಳುವಳಿಕೆ ಇಟ್ಟುಕೊಳ್ಳಬೇಡಿ ಎಂದು ಹೇಳಿದರು.
ವಕೀಲ ಆನಂದ್ ಮಾತನಾಡಿ, ಜ್ಯೋತಿಷಿಗಳು ಹೇಳುವಂತೆ ಗ್ರಹಣದಿಂದ ಯಾವುದೇ ದೋಷ ಆಗುವುದಿಲ್ಲ. ಇಂತಹ ಮೂಢನಂಬಿಕೆಗಳನ್ನು ಹೋಗಲಾಡಿಸುವುದಕ್ಕಾಗಿಯೇ ಗ್ರಹಣದ ದಿನ ಊಟದ ವ್ಯವಸ್ಥೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಮೊಟ್ಟೆ ಬಿರಿಯಾನಿ, ಬಿಸಿಬೇಳೆ ಬಾತ್, ಧಾರವಾಡ ಪೇಡ, ಸಮೋಸ, ಕಾಯಿ ಒಬ್ಬಟ್ಟು ವಿವಿಧ ರೀತಿಯ ಹಣ್ಣುಗಳು ಚರುಮುರಿ ಮತ್ತು ಇತರೆ ತಿನಿಸುಗಳನ್ನು ಮತ್ತು ಟೀ ಹಾಗೂ ಕಾಫಿಯನ್ನು ತಂದುಕೊಂಡು ಕುಡಿದರು.
ಈ ಸಂದರ್ಭದಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.






.gif)
.gif)
.gif)
.gif)

