ಕುಂದಾಪುರ: ಕೇಂದ್ರದ ಜನಪರ ಕಾರ್ಯಕ್ರಮಗಳ ಪ್ರಚಾರ ಕಾರ್ಯಕ್ಕೆ ಚಾಲನೆ

ಕುಂದಾಪುರ, ಜೂ.21: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೆಂದ್ರ ಸರಕಾರದ ಎರಡನೆ ಅವಧಿಯ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಜನಪರ ಕಾರ್ಯಕ್ರಮಗಳು ಹಾಗೂ ಪ್ರಧಾನಿಯವರ ಹಸ್ತಕ್ಷರವಿರುವ ಪತ್ರವನ್ನು ಸಚಿವ ಕೋಟ ಶ್ರೀನಿವಾಸ ಪುಜಾರಿ ರವಿವಾರ ಕೋಡಿ ಕನ್ಯಾನ ಹಾಗೂ ವಡ್ಡರ್ಸೆ ಗ್ರಾಪಂ ವ್ಯಾಪ್ತಿಯ ಮನೆಮನೆಗೆ ಭೇಟಿ ನೀಡಿ ಹಂಚುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಭಾರತ ದೇಶದ ಪ್ರತಿಯೊಬ್ಬ ಪ್ರಜೆಯು ಹೆಮ್ಮೆ ಪಡುವಂತಹ ಕೆಲಸವನ್ನು ಮೋದಿ ಸರಕಾರ ಮಾಡುತ್ತಿದೆ. ಜಗತ್ತನ್ನೇ ಕಾಡಿದ ಕೊರೊನ ನಿಯಂತ್ರಣಕ್ಕೆ ತರುವ ರೀತಿ ಹಾಗೂ ಕೊರೊನ ವಿರುದ್ಧ ಹೊರಾಡುವ ಕಾರ್ಯಕ್ರಮಗಳಿಂದ ವಿಶ್ವವೇ ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದೆ ಎಂದು ಹೇಳಿದರು.
ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ತಾಪಂ ಸದಸ್ಯರಾದ ಗುಂಡು ಶೆಟ್ಟಿ, ಐರೋಡಿ ವಿಠ್ಠಲ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ, ಗ್ರಾಪಂ ಅಧ್ಯಕ್ಷೆ ಹೇಮ, ಉಪಾಧ್ಯಕ್ಷೆ ಲೀಲಾವತಿ ಶೆಟ್ಟಿ, ನ್ಯಾಯವಾದಿ ಉದಯ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಚಂದ್ರ ಶೆಟ್ಟಿ, ರಾಜು ಪೂಜಾರಿ, ಅಜಿತ್ ಶೆಟ್ಟಿ, ಕುಶಾಲ್ ಶೆಟ್ಟಿ ಕಾವಾಡಿ ರಾಜು ಪೂಜಾರಿ, ಹರೀಶ್ ಶೆಟ್ಟಿ, ವಿಜಯ್ ಕುಮಾರ್ ಕೊಟ್ಟಾಡಿ ಮೊದಲಾದವರು ಉಪಸ್ಥಿತರಿದ್ದರು.







