ಮೂಡುಬಿದಿರೆ: ಚಿರತೆ ದಾಳಿಗೆ ಹೋರಿ ಬಲಿ
ಮೂಡುಬಿದಿರೆ: ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಮಾರು ಎಂಬಲ್ಲಿ ಚಿರತೆಯೊಂದು ಹೋರಿ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಹೋರಿ ಸಾವನಪ್ಪಿದ ಘಟನೆ ಶನಿವಾರ ನಡೆದಿದೆ.
ಸಾವನಪ್ಪಿದ ಹೋರಿ ಕೇಮಾರು ಭಜನಾ ಮಂದಿರ ಸಮೀಪದ ರಾಜು ಮೇರ ಎಂಬವರಿಗೆ ಸೇರಿದ್ದಾಗಿದೆ. ಎಂದಿನಂತೆ ಮೇಯಲು ಹತ್ತಿರದ ಗುಡ್ಡಕ್ಕೆ ಹೋಗಿದ್ದ ಹೋರಿಯನ್ನು ಶನಿವಾರ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ದೇಹದ ಅರ್ಧ ಭಾಗವನ್ನು ಚಿರತೆ ತಿಂದು ಬಿಟ್ಟು ಹೋಗಿದ್ದು ರವಿವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು.
ಕಳೆದ ವರ್ಷ ಇದೇ ಮನೆಯ ಹಸುವೊಂದು ಚಿರತೆ ದಾಳಿಗೆ ಸಾವನಪ್ಪಿದ್ದು ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಮನೆಯವರಿಗೆ ಸರಕಾರದಿಂದ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಅರಣ್ಯ ಇಲಾಖೆಗೆ ದೂರು ನೀಡಲಿಲ್ಲ ಎನ್ನಲಾಗಿದೆ.
Next Story





