ಬ್ಯಾರಿಕೇಡ್‍ಗೆ ಕಾರು ಢಿಕ್ಕಿ: ಮಗು ಸೇರಿ ಐದು ಮಂದಿಗೆ ಗಾಯ

ಮಂಡ್ಯ, ಜೂ.21: ಬ್ಯಾರಿಕೇಡ್‍ಗೆ ಕಾರು ಢಿಕ್ಕಿಯಾಗಿ ನಾಲ್ಕು ವರ್ಷದ ಮಗು ಸೇರಿದಂತೆ ಐದು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಛತ್ರಲಿಂಗನದೊಡ್ಡಿ ಸಮೀಪ ರವಿವಾರ ಬೆಳಗ್ಗೆ ನಡೆದಿದೆ.
ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದ ಪುನೀತ್, ಪ್ರಣವ್, ಸಾವಿತ್ರಮ್ಮ, ಜಯಶೀಲ ಹಾಗೂ ಕಾರಿನ ಚಾಲಕ ಚೇತನ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.
Next Story





