ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿತ ‘ಕೇಂದ್ರ ಮಾರುಕಟ್ಟೆ’ಗೆ ದ.ಕ. ವೆಲ್ಫೇರ್ ಪಾರ್ಟಿ ತಂಡ ಭೇಟಿ

ಮಂಗಳೂರು, ಜೂ. 22: ಮಂಗಳೂರು ಕೇಂದ್ರ ಮಾರುಕಟ್ಟೆಯನ್ನು ಇದೀಗ, ದೂರದ ಬೈಕಂಪಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎಪಿಎಂಸಿ ಯಾರ್ಡ್)ಕ್ಕೆ ಸ್ಥಳಾಂತರಿಸುವ ಅಂತಿಮ ಸಿದ್ಧತೆಯ ಬಗ್ಗೆ ಎದ್ದಿರುವ ವಿವಾದಗಳು ಮತ್ತು ಸದ್ಯ ಸ್ಥಳಾಂತರಿತಗೊಂಡಿರುವ ಎಪಿಎಂಸಿ ಮಾರುಕಟ್ಟೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ನಾಯಕರ ತಂಡವು ಇತ್ತೀಚೆಗೆ ಭೇಟಿ ನೀಡಿ ಪರಿಶೀಲಿಸಿತು.
ಎಪಿಎಂಸಿ ಮಾರುಕಟ್ಟೆಯ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದರೆ, ಚರಂಡಿಗಳು ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಸರಿಯಾದ ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವ್ಯಾಪಾರ ಕಷ್ಟಕರ. ಆದ್ದರಿಂದ ಇಲ್ಲಿನ ಮೂಲಭೂತ ಅಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಗಮನಹರಿಸಿ ಆದಷ್ಟು ಬೇಗ ಇದರ ಪರಿಹಾರ ಮಾರ್ಗ ಗಳನ್ನು ಕಂಡುಕೊಳ್ಳಬೇಕಾಗಿದೆ. ಇಲ್ಲಿನ ಕಟ್ಟಡಗಳನ್ನು ದುರಸ್ತಿ ಮಾಡಿ ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಬೇಕು ವೆಲ್ಫೇರ್ ಪಾರ್ಟಿ ಜಿಲ್ಲಾದ್ಯಕ್ಷ ಸುಲೈಮಾನ್ ಕಲ್ಲರ್ಪೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ತಂಡದಲ್ಲಿ ಎಫ್‌ಐಟಿಯು ಜಿಲ್ಲಾ ಕಾರ್ಯದರ್ಶಿ ದಿವಾಕರ್ ಬೋಳೂರು, ಮಂಗಳೂರು ವಲಯ ವೆಲ್ಫೇರ್ ಪಾರ್ಟಿ ಅಧ್ಯಕ್ಷ ಎಸ್.ಎಂ.ಮುತ್ತಲಿಬ್, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಝಾಹಿದ್ ಹುಸೈನ್, ಫ್ರಟರ್ನಿಟಿ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ತಫ್ಲೀಲ್ ಉಪಸ್ಥಿತರಿದ್ದರು.










