ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ವತಿಯಿಂದ ವನಮಹೋತ್ಸವ

ಎಲಿಮಲೆ: ಎಲಿಮಲೆ ಬದ್ರಿಯಾ ಜಮಾಅತ್ ಕಮಿಟಿ ನೇತೃತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವು ಮಸೀದಿ ವಠಾರದಲ್ಲಿ ನಡೆಯಿತು.
ಮಹಮೂದ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ಪ್ರತಿವರ್ಷ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರಯತ್ನಿಸಬೇಕು ಎಂದರು.
ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಉತ್ತಮ ಮಳೆ ಗಾಳಿ ಆರೋಗ್ಯಕ್ಕಾಗಿ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಬೇಕು. ಪ್ರಕೃತಿಯ ಉಳಿವು ಹಾಗೂ ಬೆಳವಣಿಗೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಎಲಿಮಲೆ ಮಸೀದಿ ಕಮಿಟಿಯವರು ವನಮಹೋತ್ಸವ ಆಚರಿಸುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ, ಅರಣ್ಯ ರಕ್ಷಕ ಜಯಪ್ರಕಾಶ್ ಚಿದಾನಂದ, ಅರಣ್ಯ ವೀಕ್ಷಕ ಸುರೇಂದ್ರ, ಸಿಬ್ಬಂದಿ ಹಾಗೂ ಜಮಾಅತ್ ಹಿರಿಯರಾದ ಟಿ.ವೈ ಇಬ್ರಾಹಿಂ, ಮಹಮ್ಮದ್ ಕುಂಞಿ ಮೇಲೆಬೈಲು, ಅಬೂಬಕ್ಕರ್ ಪಾಣಾಜೆ, ಕಲಂದರ್ ಎಲಿಮಲೆ, ಸಿದ್ದಿಕ್ ಜೀರ್ಮುಕ್ಕಿ, ಸೂಫಿ ಎಲಿಮಲೆ, ಜುನೈದ್ ಸಖಾಫಿ, ಅಬ್ದುಲ್ಲ ಜೀರ್ಮುಕ್ಕಿ, ಹೈದರ್ ಹಾಜಿ, ಅಶ್ರಫ್ ಜೀರ್ಮುಕ್ಕಿ ಹಾಗೂ ಜಮಾಅತ್ ಸದಸ್ಯರು ಉಪಸ್ಥಿತರಿದ್ದರು.
ಜಮಾಅತ್ ಕಾರ್ಯದರ್ಶಿ ಹನೀಫ್ ಮೆತ್ತಡ್ಕ ವಂದಿಸಿದರು.










