ಕೋಳಿಅಂಕಕ್ಕೆ ದಾಳಿ: 12 ಮಂದಿ ಬಂಧನ
ಮಲ್ಪೆ, ಜೂ.22: ಮೂಡುತೋನ್ಸೆ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ಜೂ.21ರಂದು ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.
ಪ್ರವೀಣ್ ಜೈಸನ್ ಡಿಸೋಜ(27), ಪ್ರಕಾಶ್ ಶೆಟ್ಟಿ(38), ಸತೀಶ್(50), ಸತೀಶ್ ದೇವಾಡಿಗ(44), ಲೋಕೇಶ್(19), ಯೋಗೀಶ್(30), ಸುನೀಲ್ (28), ಪ್ರಶಾಂತ್(23), ರತ್ನಾಕರ್(35), ರೋಶನ್(39), ಕೃಷ್ಣ(34), ನಿತೀಶ್(28) ಬಂಧಿತ ಆರೋಪಿಗಳು. ಇವರಿಂದ 10 ಕೋಳಿಗಳು, ಎರಡು ಬಾಳು ಹಾಗೂ 1800ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story