ಗುರುಪುರ: ಕಾಂಕ್ರಿಟ್ ರಸ್ತೆ ಉದ್ಘಾಟನೆ

ಗುರುಪುರ, ಜೂ. 22: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿತ ಗುರುಪುರ ಶ್ರೀಜಂಗಮ ಮಠವನ್ನು ಸಂಪರ್ಕಿಸುವ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯನ್ನು ಶಾಸಕ ಭರತ್ ಶೆಟ್ಟಿ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಈ ರಸ್ತೆಯ ಉಳಿದ ಭಾಗದ ಕಾಂಕ್ರಿಟೀಕರಣದ ಕಾಮಗಾರಿಯು 20 ಲಕ್ಷ ರೂ. ವೆಚ್ಚದಲ್ಲಿ ಶೀಘ್ರ ಆರಂಭಗೊಳ್ಳಲಿದೆ ಎಂದರು.
ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅಥಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಸೇಸಮ್ಮ, ಮುಖಂಡರಾದ ವಿಷ್ಣು ಕಾಮತ್, ನಳಿನಿ ಶೆಟ್ಟಿ, ಶ್ರೀಕರ ಶೆಟ್ಟಿ, ಸೋಮಯ್ಯ, ಸಚಿನ್ ಶೆಟ್ಟಿ, ವಿನಯ ಸುವರ್ಣ, ರಾಜೇಶ್ ಶೆಟ್ಟಿ, ಹರೀಶ್ ಬಳ್ಳಿ, ಸುನಿಲ್ ಪೂಜಾರಿ ನಡುಗುಡ್ಡೆ, ಜಿ ಕೆ ನರಸಿಂಹ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Next Story





