ಬೆಂಗಳೂರು ನಗರ: ಜೂ.24ರಂದು ಹಲವೆಡೆ ನೀರು ಪೂರೈಕೆ ವ್ಯತ್ಯಯ
ಬೆಂಗಳೂರು, ಜೂ.22: ವೆಲ್ಲಾರ ಜಂಕ್ಷನ್ ನಲ್ಲಿ ಬಿಎಂಆರ್‍ಸಿಎಲ್ ನ 900*900 ಮಿ.ಮೀ ವ್ಯಾಸದ ಕೊಳವೆ ಜೋಡಣೆ ಕಾಮಗಾರಿಗಾಗಿ ಬೆಂಗಳೂರು ಜಲಮಂಡಳಿಯ ಕಾವೇರಿ ನೀರು ಸರಬರಾಜು ಯೋಜನೆ ಒಂದನೇ ಹಂತದ ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯ ಯಂತ್ರಗಾರಗಳು ಸ್ಥಗಿತಗೊಳ್ಳುವುದರಿಂದ ಬುಧವಾರ ಜೂ.24 ರ ಬೆಳಗ್ಗೆ 9 ರಿಂದ ಗುರುವಾರ ಬೆಳಗ್ಗೆ 9 ಗಂಟೆಯವರೆಗೆ ನಗರದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬಸವನಗುಡಿ, ತ್ಯಾಗರಾಜನಗರ, ಶ್ರೀನಗರ, ಶಾಂತಿನಗರ, ಆನೇಪಾಳ್ಯ/ಎಲ್.ಆರ್.ನಗರ ,ನೀಲಸಂದ್ರ, ಬ್ರಿಗೇಡ್ ರಸ್ತೆ, ಅಶೋಕನಗರ, ವಿಕ್ಟೋರಿಯಲ್ ಬಡಾವಣೆ, ವನ್ನಾರಾಪೇಟೆ, ಈಜೀಪುರ, ಅಂಬೇಡ್ಕರ್‍ನಗರ ಮತ್ತು ಸುತ್ತಲಿನ ಪ್ರದೇಶ.
ವಿನಾಯಕ ನಗರ ,ರಿಚ್‍ಮಂಡ್ ಟೌನ್, ಅಸ್ಟೀನ್ ಟೌನ್, ಹಲಸೂರು, ಜೋಗುಪಾಳ್ಯ, ಮರ್ಫಿಟೌನ್, ಗುಪ್ತಲೇಔಟ್, ಹಲಸೂರು ರಸ್ತೆ, ದೊಮ್ಮಲೂರು ವಾರ್ಡ್, ಕೋಡಿಹಳ್ಳಿ, ಎಚ್‍ಎಎಲ್ 2 ಮತ್ತು 3ನೇ ಹಂತ. ಎಲ್‍ಐಸಿ ಕಾಲನಿ, ಜೀವನ್‍ಬೀಮಾನಗರ, ಇಂದಿರಾನಗರ, ಕೋರಮಂಗಲ 8ನೇ ಬ್ಲಾಕ್, 5ನೇ ಬ್ಲಾಕ್, ನಂಜಪ್ಪ ಲೇಔಟ್, ಪೋತಾಲಪ್ಪ ಗಾರ್ಡನ್, ಏರಮ್ಮ ಲೇಔಟ್, ಬೆಂಗಳೂರು ಡೇರಿ, ಎಸ್.ಜಿ.ಪಾಳ್ಯ, ಆಡುಗೋಡಿ, ನಂಜಪ್ಪ ಲೇಔಟ್, ಮಾರುತಿ ಲೇಔಟ್, ವೆಂಕಟೇಶ್ವರ ಲೇಔಟ್, ತಾವರೆಕೆರೆ, ಬೃಂದಾವನನಗರ, ಚಿಕ್ಕ ಆಡುಗೋಡಿ, ಬಾಲಾಜಿ ಲೇಔಟ್, ಮಡಿವಾಳ, ಭವಾನಿನಗರ, ಮಾಗಡಿರಸ್ತೆ, ಕದಿರೇನಹಳ್ಳಿ, ಮಿನಾಜ್‍ನಗರ,
ಗಂಗಾಧರನಗರ, ಪ್ರಗತಿಪುರ, ಪದ್ಮನಾಭನಗರ, ಆರ್.ಕೆ.ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿನಗರ, ಮುನೇಶ್ವರನಗರ, ಬೇಂದ್ರೇನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್‍ನಗರ, ಇಸ್ರೋ ಬಡಾವಣೆ, ಉತ್ತರಹಳ್ಳಿ, ಕೆಎಸ್‍ಆರ್‍ಟಿಸಿ ಬಡಾವಣೆ, ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ, ಎ.ಜಿ.ಎಸ್ ಲೇಔಟ್, ಸಾರ್ವಭೌಮನಗರ, ಸುಬ್ರಮಣ್ಯಪುರ, ಬಿಎಚ್‍ಸಿಎಸ್ ಬಡಾವಣೆ, ಕೆನರಾಬ್ಯಾಂಕ್ ಕಾಲನಿ, ಕಾಕತೀಯನಗರ, ಸುದ್ಗುಂಟೆ ಪಾಳ್ಯ, ಮಾರುತಿನಗರ, ಭವಾನಿನಗರ, ಸೆಂಟ್‍ಜಾನ್ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, ಸಿಎಲ್‍ಆರ್. ಎಂ.ಜಿ.ರಸ್ತೆ, ವಿವೇಕ್‍ನಗರ, ದೊಮ್ಮಲೂರು ಬಡಾವಣೆ, ದೊಮ್ಮಲೂರು ವಿಲೇಜ್, ಕೇಂಬ್ರಿಡ್ಜ್ ಬಡಾವಣೆ, ಚಾಮರಾಜಪೇಟೆ, ಶ್ರೀನಗರ, ಬನಶಂಕರಿ 1ನೇಹಂತ, ತಿಲಕ್‍ನಗರ, ಮಾಧವನ ಪಾರ್ಕ್, ಹೊಂಬೇಗೌಡನಗರ, ಲಕ್ಕಸಂದ್ರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟನೆ ತಿಳಿಸಿದೆ.







