ಖ್ಯಾತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಗೆ ಪ್ರತಿಷ್ಠಿತ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದ ಗೌರವ ಡಾಕ್ಟರೇಟ್

ಹೊಸದಿಲ್ಲಿ : ಖ್ಯಾತ ಸಾಮಾಜಿಕ ಹಾಗೂ ಅಲ್ಪಸಂಖ್ಯಾತ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಕೆನಡಾದ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿ ಒಲಿದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ ಅಂತ್ಯದಲ್ಲಿ ನಡೆಯಬೇಕಿದ್ದರೂ ಕೋವಿಡ್-19 ಭೀತಿಯ ಹಿನ್ನೆಲೆಯಲ್ಲಿ ಸಮಾರಂಭವನ್ನು ಮುಂದೂಡಲಾಗಿದೆ.
''ಗುಜರಾತ್‍ನಲ್ಲಿ 2002ರಲ್ಲಿ ಸಾವಿರಾರು ಮಂದಿ ಮುಸ್ಲಿಮರನ್ನು ಬಲಿ ಪಡೆದ ಹಿಂಸಾಚಾರದಲ್ಲಿನ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಾಗರಿಕ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಹಾಗೂ ಪ್ರಶಸ್ತಿ ವಿಜೇತ ಪತ್ರಕರ್ತೆ'' ಎಂದು ತೀಸ್ತಾ ಸೆಟಲ್ವಾಡ್ ಅವರನ್ನು ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಬಣ್ಣಿಸಿದೆ.
ವಿಶ್ವವಿದ್ಯಾಲಯವು ತನ್ನ 2020ನೇ ವರ್ಷದ ಗೌರವ ಡಾಕ್ಟರೇಟ್ ಪದವಿಗೆ ಕೆನಡಾ ನಟ ಟಂಟೂ ಕಾರ್ಡಿನಲ್, ಖ್ಯಾತ ಲೇಖಕ ಲಾರೆನ್ಸ್ ಹಿಲ್, ಸಂಗೀತಕಾರ ಡೌಗ್ ಜಾನ್ಸನ್ ಸಹಿತ ಒಂಬತ್ತು ಮಂದಿಯನ್ನು ಆರಿಸಿದೆ.
Next Story





