ಪಾಕ್ನ ಮೂವರು ಕ್ರಿಕೆಟಿಗರಿಗೆ ಕೋವಿಡ್-19 ದೃಢ
Photo: Twitter (@TheRealPCBMedia)
ಲಾಹೋರ್, ಜೂ.22: ಆಲ್ರೌಂಡರ್ ಶಾದಾಬ್ ಖಾನ್, ಯುವ ಬ್ಯಾಟ್ಸ್ಮನ್ ಹೈದರ್ ಅಲಿ ಹಾಗೂ ವೇಗದ ಬೌಲರ್ ಹಾರಿಸ್ ರವೂಫ್ಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಸೋಮವಾರ ಖಚಿತಪಡಿಸಿದೆ.
ಕೋವಿಡ್-19 ಪರೀಕ್ಷೆಗೆ ಮೊದಲು ಎಲ್ಲ ಮೂವರು ಆಟಗಾರರಿಗೆ ಸೋಂಕಿನ ಗುಣಲಕ್ಷಣ ಕಂಡುಬಂದಿರಲಿಲ್ಲ. ಪಾಕಿಸ್ತಾನ ತಂಡ ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳುವ ಮೊದಲು ಮೂವರು ರಾವಲ್ಪಿಂಡಿಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಮೂವರು ಆಟಗಾರರಿಗೆ ತಕ್ಷಣವೇ ಸ್ವಯಂ ಪ್ರತ್ಯೇಕವಾಸವಾಗಿರಲು ಸೂಚಿಸಲಾಗಿದೆ ಎಂದು ಪಿಸಿಬಿ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದೆ.
Next Story