ಸೇನಾ ಮುಖ್ಯಸ್ಥ ನರವಾನೆ ಲಡಾಖ್‌ಗೆ ದ್ವಿದಿನ ಭೇಟಿ

ಹೊಸದಿಲ್ಲಿ, ಜೂ.23: ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಎರಡು ದಿನಗಳ ಭೇಟಿಗಾಗಿ ಲಡಾಖ್‌ಗೆ ತೆರಳಿದ್ದು, ಗಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ಭಾರತ-ಚೀನಾ ಸೈನಿಕರ ನಡುವೆ ನಡೆದಿದ್ದ ಸಂಘರ್ಷದ ಹಿಂಸಾಚಾರದ ಬಳಿಕದ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.
ಕಳೆದ ಸೋಮವಾರ ಉಭಯ ದೇಶಗಳ ಸೈನಿಕರ ನಡುವೆ ನಡೆದಿದ್ದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.
ನರವಾನೆ ಎರಡು ದಿನಗಳ ಭೇಟಿ ವೇಳೆ ಚೀನಾ ಮಿಲಿಟರಿಯೊಂದಿಗಿನ ಮಾತುಕತೆಯ ಪ್ರಗತಿಯ ಬಗ್ಗೆ ಪರಾಮರ್ಶಿಸಲಿದ್ದಾರೆ. ಲೇಹ್‌ನಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿರುವ ಸೈನಿಕರನ್ನು ಭೇಟಿಯಾಗಿ ಸಂವಹನ ನಡೆಸಲಿದ್ದಾರೆ.
11 ಗಂಟೆಗೂ ಅಧಿಕ ಕಾಲ ಭಾರತ-ಚೀನಾದ ಉನ್ನತ ಮಟ್ಟದ ಮಿಲಿಟರಿ ಮಾತುಕತೆ ನಡೆಸಿದ ಬಳಿಕ ಸೇನಾ ಮುಖ್ಯಸ್ಥ ನರವಾನೆ ಲಡಾಖ್‌ಗೆ ಭೇಟಿ ನೀಡುತ್ತಿದ್ದಾರೆ.
Next Story