ಬೆಂಗಳೂರಿಗೆ ಹೋಗಿ ಬರುವುದಾಗಿ ತೆರಳಿದ ಯುವತಿ ನಾಪತ್ತೆ

ಕೊಳ್ಳೇಗಾಲ, ಜೂ.23: ಬೆಂಗಳೂರಿಗೆ ಹೋಗಿ ಬರುವುದಾಗಿ ಎಂದು ಹೇಳಿ ಹೋದ ಯುವತಿ ಕಾಣೆಯಾಗಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದ ಬಳಿ ಜರುಗಿದೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ರಾಜು ಎಂಬುವರ ಮಗಳಾದ ಸುಶ್ಮಿತಾ(20) ಕಾಣೆಯಾದ ಯುವತಿ.
ಈಕೆ ತನ್ನ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸವಿದ್ದು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಲಾಕ್‍ಡೌನ್‍ದಿಂದಾಗಿ ಕಳೆದ ಮೂರು ತಿಂಗಳ ಹಿಂದೆ ತಮ್ಮ ಸ್ವಗ್ರಾಮಕ್ಕೆ ಕುಟುಂಬ ಸಮೇತ ವಾಪಸ್ಸಾಗಿದ್ದರು. ಇದೇ ತಿಂಗಳು 13 ರಂದು ಬೆಂಗಳೂರಿಗೆ ಹೋಗಿ ಬಾಕಿಯಿರುವ ಸಂಬಳ ಪಡೆದುಕೊಂಡು ಬರುವುದಾಗಿ ಹೇಳಿ ಹೋದವಳು ಕಾಣೆಯಾಗಿದ್ದಾಳೆ. ಈ ಸಂಬಂಧ ಯುವತಿ ತಂದೆ ರಾಜು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾಣೆಯಾದ ಯುವತಿಯ ಪತ್ತೆಗೆ ಕ್ರಮವಹಿಸಿದ್ದಾರೆ.
Next Story





