ನೀರುಮಾರ್ಗ: ಹಕ್ಕುಪತ್ರ ವಿತರಣೆ

ಮಂಗಳೂರು, ಜೂ.23: ಲಕ್ಷಾಂತರ ಮೊತ್ತದ ಕಾಮಗಾರಿ ನಡೆಸಿ ಕೊಡುವುದಕ್ಕಿಂತಲೂ ಹೆಚ್ಚಾಗಿ ಜನಸಾಮಾನ್ಯರಿಗೆ ಹಕ್ಕುಪತ್ರ ನೀಡಿದಾಗ ಅತೀವ ಖುಷಿಯಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ನೀರುಮಾರ್ಗದಲ್ಲಿ ಗ್ರಾಪಂ ವ್ಯಾಪ್ತಿಯ 25 ಕುಟುಂಬಕ್ಕೆ ಮಂಗಳವಾರ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಕೇವಲ ಎರಡು ವರ್ಷದ ಅವಧಿಯಲ್ಲಿ 4,500 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ನೀಡಿದಾಗ ಅವರ ಬಹುದಿನಗಳ ಕನಸು ನನಸಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನೀರುಮಾರ್ಗ ಗ್ರಾಪಂ ಅಧ್ಯಕ್ಷೆ ಕುಸ್ತೂರಿ, ಉಪಾಧ್ಯಕ್ಷ ಕಿಶೋರ್ ಕುಮಾರ್, ಉಪತಹಶೀಲ್ದಾರ್ ಶಿವಪ್ರಸಾದ್ ನೀರುಮಾರ್ಗ, ಪಿಡಿಒ ಸುಧೀರ್, ಗ್ರಾಮ ಲೆಕ್ಕಾಧಿಕಾರಿ ಅಮ್ಜದ್ ಖಾನ್, ಬಿಜೆಪಿ ಮುಖಂಡರಾದ ಸಚಿನ್ ಹೆಗ್ಡೆ, ಚೇತನ ನಟ್ಟಿಲ್, ಗ್ರಾಪಂ ಸದಸ್ಯರಾದ ಪವಿತ್ರಾ, ಸಂತೋಷ್ ಲೂಯಿಸ್ ಮತ್ತಿತರರು ಪಾಲ್ಗೊಂಡಿದ್ದರು.
Next Story





