ಅಮೆರಿಕ ಈಜುಕೊಳದಲ್ಲಿ ಭಾರತೀಯ ಕುಟುಂಬದ ಮೂವರ ಮೃತದೇಹ ಪತ್ತೆ

ಪೂರ್ವ ಬರ್ನ್ಸ್‌ವಿಕ್ (ಅಮೆರಿಕ): ಭಾರತೀಯ ಮೂಲದ ಕುಟುಂಬವೊಂದರ ಮೂವರು ಈಜುಕೊಳದ ಹಿಂಭಾಗ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭರತ್ ಪಟೇಲ್ (62), ಅವರ ಸೊಸೆ ನಿಶಾ ಪಟೇಲ್ (33) ಮತ್ತು ಆಕೆಯ 8 ವರ್ಷದ ಪುತ್ರಿಯ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ. ಚೀರಾಟ ಕೇಳಿ ನೆರೆಯವರು ಸಹಾಯವಾಣಿಗೆ ಕರೆ ಮಾಡಿದರು. ಪೊಲೀಸರು ಆಗಮಿಸಿದಾಗ ಮೂವರೂ ಮೃತಪಟ್ಟಿದ್ದರು ಎಂದು ಪೊಲೀಸ್ ಲೆಫ್ಟಿನೆಂಟ್ ಫ್ರಾಂಕ್ ಸಟ್ಟರ್ ವಿವರಿಸಿದ್ದಾರೆ.
ಇದು ಆಕಸ್ಮಿಕವಾಗಿ ಮುಳುಗಿ ಸಂಭವಿಸಿದ ಸಾವು ಎಂದು ಮಿಡ್ಲ್‌ಸೆಕ್ಸ್ ಕೌಂಟಿ ಪ್ರಾದೇಶಿಕ ವೈದ್ಯಕೀಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಈ ಮನೆಗೆ ಕುಟುಂಬ ಹೊಸದಾಗಿ ಬಂದಿತ್ತು ಎಂದು ನೆರೆಯವರು ಹೇಳಿದ್ದಾರೆ.
ಇದು ಇಡೀ ಸಮುದಾಯಕ್ಕೆ ಆಘಾತಕಾರಿ ದಿನ ಎಂದು ಪೊಲೀಸ್ ಮುಖ್ಯಸ್ಥ ಫ್ರಾಂಕ್ ಲೊಸ್ಯಾಕೊ ಹೇಳಿಕೆ ನೀಡಿದ್ದಾರೆ.
Next Story





