ಕೊರೋನ ಸೋಂಕು ದೃಢಪಟ್ಟಿದ್ದ ಪಶ್ಚಿಮ ಬಂಗಾಳ ಶಾಸಕ ನಿಧನ

ಕೋಲ್ಕತಾ, ಜೂ.24: ಕೊರೋನ ವೈರಸ್ ಸೋಂಕಿತ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಶ್ ಘೋಷ್ ಇಂದು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ಘೋಷ್‌ರಿಗೆ ಕಳೆದ ತಿಂಗಳು ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.
ಫಲ್ಟಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಗೂ 1998ರಿಂದ ಪಕ್ಷದ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದ ಘೋಷ್ ನಿಧನ ಅತ್ಯಂತ ಬೇಸರದ ವಿಚಾರ. ನಮ್ಮೊಂದಿಗೆ 35 ವರ್ಷಗಳ ಕಾಲ ಇದ್ದ ಅವರು ಪಕ್ಷ ಹಾಗೂ ಜನತೆಯ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ಕೊಡುಗೆಯನ್ನು ನೀಡಿದ್ದರು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅವರಿಂದ ತೆರವಾದ ಸ್ಥಾನವನ್ನು ತುಂಬುವುದು ತುಂಬಾ ಕಷ್ಟಕರ. ಎಲ್ಲರ ಪರ ಘೋಷ್ ನಿಧನದ ಸುದ್ದಿಯನ್ನು ಸಹಿಸುವ ಶಕ್ತಿ ಅವರ ಪತ್ನಿ ಜಾರ್ನ ಹಾಗೂ ಇಬ್ಬರು ಪುತ್ರಿಯರು ಹಾಗೂ ಸ್ನೇಹಿತರಿಗೆ ಸಿಗಲಿ ಎಂದು ಹಾರೈಸುವೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
Next Story





