Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತನ್ನ ಅಚ್ಚುಮೆಚ್ಚಿನ ಕಾರು ಮಾರಿ...

ತನ್ನ ಅಚ್ಚುಮೆಚ್ಚಿನ ಕಾರು ಮಾರಿ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಕಿಟ್ ವಿತರಿಸಿದ ಶಹನವಾಝ್ ಶೇಖ್

ವಾರ್ತಾಭಾರತಿವಾರ್ತಾಭಾರತಿ24 Jun 2020 11:59 AM IST
share
ತನ್ನ ಅಚ್ಚುಮೆಚ್ಚಿನ ಕಾರು ಮಾರಿ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಕಿಟ್ ವಿತರಿಸಿದ ಶಹನವಾಝ್ ಶೇಖ್

ಮುಂಬೈ: ಮುಂಬೈಯ ಮಲಾಡ್ ನಿವಾಸಿ, 31 ವರ್ಷದ ಶಹನವಾಝ್ ಶೇಖ್ ಅವರಿಗೆ  ತಮ್ಮ ಫೋರ್ಡ್ ಎಂಡೆವರ್ ಕಾರು ಎಂದರೆ ಅಚ್ಚುಮೆಚ್ಚು. 2011ರಲ್ಲಿ ಅವರು ಈ ಕಾರು ಖರೀದಿಸಿದ್ದ ಸಂದರ್ಭ ಅದಕ್ಕೆ  ಪ್ರೀಮಿಯಂ ನಂಬರ್ ಪ್ಲೇಟ್-007 ಹಾಗೂ ಕಸ್ಟಮೈಸ್ಡ್ ಮ್ಯೂಸಿಕ್ ಸಿಸ್ಟಂ ಪಡೆಯಲು ಸ್ವಲ್ಪ ಹೆಚ್ಚೇ  ಖರ್ಚು ಮಾಡಿದ್ದರು. ಲಾಕ್ ಡೌನ್ ಸಂದರ್ಭ ಅವರು ತಮ್ಮ ಈ ಅಚ್ಚುಮೆಚ್ಚಿನ ಕಾರನ್ನು ತಾತ್ಕಾಲಿಕವಾಗಿ ಅಂಬ್ಯುಲೆನ್ಸ್ ಆಗಿ ಪರಿವರ್ತಿಸಿದ್ದರು. ಆದರೆ ಮೇ 28ರಂದು ಅವರ ಉದ್ಯಮ ಪಾಲುದಾರನ ಸೋದರಿ, ಆರು ತಿಂಗಳ ಗರ್ಭಿಣಿಯಾಗಿದ್ದ ಹಾಗೂ ಕೋವಿಡ್-19 ಸೋಂಕಿಗೆ ಒಳಗಾಗಿದ್ದ  ಮಹಿಳೆಗೆ ಐದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಿ ಆಕೆ ಇನ್ನೊಂದು ಆಸ್ಪತ್ರೆಯ ಹೊರಗೆ ಆಟೋರಿಕ್ಷಾದಲ್ಲಿಯೇ ಮೃತಪಟ್ಟ ಘಟನೆ ನಂತರ ಶಹನವಾಝ್ ಅವರ ಯೋಚನಾ ದಿಕ್ಕೇ ಬದಲಾಗಿತ್ತು.

ಆಕೆಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ದೊರಕುತ್ತಿದ್ದರೆ ಆಕೆಯ ಜೀವವುಳಿಸಬಹುದಾಗಿತ್ತು ಎಂದು ತಿಳಿದಾಗ ಶಹನವಾಝ್ ತಮ್ಮ ಅಚ್ಚುಮೆಚ್ಚಿನ ಎಸ್‍ಯುವಿಯನ್ನು ಮಾರಾಟ ಮಾಡಿಬಿಟ್ಟರು. ಅಷ್ಟೇ ಅಲ್ಲದೆ ಅದರಿಂದ ದೊರೆತ ಹಣದಿಂದ ಆಮ್ಲಜನಕ ಸಿಲಿಂಡರ್ ಖರೀದಿಸಿ ಅವುಗಳನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾರಂಭಿಸಿದರು ಎಂದು mumbaimirror.indiatimes.com ವರದಿ ಮಾಡಿದೆ.

ಅವರು ತಮ್ಮ ಈ ಉದಾತ್ತ ಕೈಂಕರ್ಯವನ್ನು ಜೂನ್ 5ರಂದು ಆರಂಭಿಸಿದ್ದು ಇಲ್ಲಿಯ ತನಕ ಕೋವಿಡ್-19 ರೋಗಿಗಳಿರುವ 250ಕ್ಕೂ ಅಧಿಕ  ಕುಟುಂಬಗಳಿಗೆ ಉಚಿತವಾಗಿ ಆಮ್ಲಜನಕ ಕಿಟ್ ಒದಗಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಹನವಾಝ್ ಮತ್ತವರ ಸ್ನೇಹಿತರು ತಮ್ಮ ಫೋನ್ ನಂಬರ್ ನೀಡಿ ಅಗತ್ಯವಿರುವವರಿಗೆ ಆಮ್ಲಜನಕ ಕಿಟ್ ವಿತರಿಸಿದ್ದು ಮಾತ್ರವಲ್ಲದೆ ಅವುಗಳನ್ನು ಬಳಸುವ ವಿಧವನ್ನೂ ತಿಳಿಸುತ್ತಾರೆ.

ಯಾವ ರೋಗಿಗೆ ಯಾವ ಮಟ್ಟದಲ್ಲಿ ಆಕ್ಸಿಜನ್ ಒದಗಿಸಬೇಕೆಂದು ವೈದ್ಯರನ್ನು ಸಂಪರ್ಕಿಸಿ ತಿಳಿಯಬೇಕೆಂದೂ ಅವರು ಕುಟುಂಬಗಳಿಗೆ ತಿಳಿಸುತ್ತಾರೆ. ತಮ್ಮ ಅಚ್ಚುಮೆಚ್ಚಿನ ಎಸ್‍ಯುವಿ ಮಾರಾಟ ಮಾಡಿದ್ದಕ್ಕಾಗಿ ಬೇಸರವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲ, ಒಬ್ಬರ ಜೀವ ಉಳಿಸಲು ಒಂದು ಕಾರನ್ನು ಬಿಟ್ಟುಕೊಡುವುದು ಕಷ್ಟವಲ್ಲ. ಈ ಕಾರ್ಯಕ್ಕಾಗಿ ಒಂದೇ ಒಂದು ಕುಟುಂಬದ ಆಶೀರ್ವಾದ ದೊರೆತರೂ ಸಾಕು, ಮುಂದೊಂದು ದಿನ ನಾನು ಇಂತಹ ನಾಲ್ಕು ಕಾರುಗಳನ್ನು ಖರೀದಿಸಬಲ್ಲೆ,'' ಎಂದು ಅವರು ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X