ಎಪ್ರಿಲ್ 14ಕ್ಕಿಂತ ಮುಂಚಿತವಾಗಿ ಕಾದಿರಿಸಿದ್ದ ರೈಲು ಟಿಕೆಟ್ ಹಣ ವಾಪಸ್ ನೀಡಲಿರುವ ರೈಲ್ವೆ ಇಲಾಖೆ
ಹೊಸದಿಲ್ಲಿ: ಪ್ಯಾಸೆಂಜರ್ ರೈಲುಗಳಲ್ಲಿ ಎಪ್ರಿಲ್ 14 ಅಥವಾ ಅದಕ್ಕಿಂತ ಮುಂಚಿತವಾಗಿ ಕಾದಿರಿಸಿದ ಟಿಕೆಟ್‍ಗಳನ್ನು ರದ್ದುಗೊಳಿಸಿ ಸಂಬಂಧಿತರಿಗೆ ವಾಪಸ್ ಮಾಡುವುದಾಗಿ ಭಾರತೀಯ ರೈಲ್ವೆ ಮಂಗಳವಾರ ಘೋಷಿಸಿದೆ.
ಶ್ರಮಿಕ್ ವಿಶೇಷ ರೈಲುಗಳನ್ನು ಹೊರತು ಪಡಿಸಿ ಇತರ ಸಾಮಾನ್ಯ ರೈಲುಗಳಲ್ಲಿ ಜೂನ್ 30ರ ತನಕದ ಹಳೆ ಬುಕ್ಕಿಂಗ್‍ಗಳನ್ನು ಮೇ 14ರಂದು ಭಾರತೀಯ ರೈಲ್ವೆ ರದ್ದುಗೊಳಿಸಿತ್ತು. ಕೋವಿಡ್-19 ಲಾಕ್ ಡೌನ್ ಸಂದರ್ಭ ರೈಲು ಸೇವೆಗಳನ್ನು ಸ್ಥಗಿತಗೊಳಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿತ್ತು.
ರೀಫಂಡ್ ಪಡೆಯುವುದು ಹೇಗೆ ?
1) ಪಿಆರ್ ಎಸ್ ಕೌಂಟರ್ ಟಿಕೆಟ್‍ಗಳಿಗೆ ಪ್ರಯಾಣಿಕರು ತಮ್ಮ ಪ್ರಯಾಣದ ದಿನಾಂಕದ ಆರು ತಿಂಗಳುಗಳೊಳಗಾಗಿ ರೀಫಂಡ್‍ಗೆ ತಮ್ಮ ಟಿಡಿಆರ್ (ಟಿಕೆಟ್ ಡೆಪಾಸಿಟ್ ರಶೀದಿ) ಜತೆ ಅರ್ಜಿ ಸಲ್ಲಿಸಬಹುದು.
2) ಇ-ಟಿಕೆಟ್‍ಗಳು ತನ್ನಿಂತಾನಾಗಿಯೇ ರೀಫಂಡ್ ಪಡೆಯುತ್ತವೆ.
ಸಂಬಂಧಿತರು ಪ್ರಯಾಣಿಸಲಿದ್ದ ರೈಲು ರದ್ದುಗೊಂಡಿರದೇ ಇದ್ದರೆ ಹಾಗೂ ಪ್ರಯಾಣಿಕರು ಪ್ರಯಾಣ ಮಾಡಲು ಇಷ್ಟವಿಲ್ಲದೇ ಇದ್ದಲ್ಲಿ ಸಂಪೂರ್ಣ ಮೊತ್ತವನ್ನು ರೀಫಂಡ್ ಮಾಡಲಾಗುವುದು.
ಪಿಆರ್‍ಎಸ್ ಕೌಂಟರ್ ಟಿಕೆಟ್‍ಗಳನ್ನು 139 ಅಥವಾ ಐಆರ್ ಸಿಟಿಸಿಯ ವೆಬ್‍ಸೈಟ್ ಮೂಲಕ ಪ್ರಯಾಣ ಮಾಡಲಿದ್ದ ದಿನಾಂಕದಿಂದ ಆರು ತಿಂಗಳುಗಳೊಗೆ ರದ್ದುಗೊಳಿಸಬಹುದು. ಈಗಾಗಲೇ ಟಿಕೆಟ್ ರದ್ದುಗೊಳಿಸಿದವರು ಕ್ಯಾನ್ಸಲೇಶನ್ ಶುಲ್ಕ ರೀಫಂಡ್‍ಗೂ ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಅರ್ಜಿಗಳನ್ನು ಸಂಬಂಧಿತ ವಲಯ ರೈಲ್ವೆ ಮುಖ್ಯ ಕಾರ್ಯಾಲಯದ ಚೀಫ್ ಕ್ಲೇಮ್ ಆಫೀಸರ್ ಅಥವಾ ಚೀಫ್ ಕಮರ್ಷಿಯಲ್ ಮ್ಯಾನೇಜರ್/ರೀಫಂಡ್ ಇವರಿಗೆ ಪ್ರಯಾಣ ಮಾಡಲಿದ್ದ ದಿನಾಂಕದಿಂದ ಆರು ತಿಂಗಳುಗಳೊಳಗಾಗಿ ಅರ್ಜಿ ಸಲ್ಲಿಸಬೇಕು.