ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿಗೆ ಕೊರೋನ ಪಾಸಿಟಿವ್

ಬೆಂಗಳೂರು, ಜೂ.24: ರಾಜ್ಯ ಮೀಸಲು ಪಡೆ(ಕೆಎಸ್‍ಆರ್ ಪಿ) ಕಮಾಂಡೆಂಟ್ ಸಹ ಆಗಿರುವ ಹಿರಿಯ ಐಪಿಎಸ್ ಅಧಿಕಾರಿಯೋರ್ವರಿಗೆ ಕೊರೋನ ಸೋಂಕು ದೃಢಪಟ್ಟಿರುವುದು ಪೊಲೀಸ್ ಇಲಾಖೆಯ ಆತಂಕ ಹೆಚ್ಚಿಸಿದೆ.
ನಗರದ ಆಸ್ಟಿನ್ ಟೌನ್‍ನಲ್ಲಿರುವ ಕೆಎಸ್‍ಆರ್ ಪಿ ವಸತಿ ಗೃಹದಲ್ಲಿ ವಾಸಿಸುತ್ತಿರುವ ಅಧಿಕಾರಿಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಈ ಅಧಿಕಾರಿ ಕಾರ್ಯ ನಿರ್ವಹಿಸುವ ಬೆಟಾಲಿಯನ್‍ನಲ್ಲಿ ಇದುವರೆಗೂ ಯಾರೊಬ್ಬರಿಗೂ ಪಾಸಿಟಿವ್ ಕಾಣಿಸಿಕೊಂಡಿಲ್ಲ. ಆದರೂ ಅವರಿಗೆ ಸೋಂಕು ತಗಲಿರುವುದು ಹೇಗೆ ಎಂಬ ಪ್ರಶ್ನೆ ಆರೋಗ್ಯಾಧಿಕಾರಿಗಳಿಗೆ ಕಾಡುತ್ತಿದೆ.
ಮೂರು ದಿನಗಳ ಹಿಂದೆ ಐಪಿಎಸ್ ಅಧಿಕಾರಿಗೆ ಉಸಿರಾಟದ ತೊಂದರೆ ಹಾಗೂ ಗಂಟಲು ನೋವು ಕಾಣಿಸಿಕೊಂಡಿತ್ತು. ಬಳಿಕ, ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಸೋಂಕಿತ ಸಿಬ್ಬಂದಿಯ ಸಂಪರ್ಕದಿಂದ ಕೊರೋನ ಸೋಂಕು ತಗಲಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತವಾಗಿದೆ.
Next Story





