ಶ್ರೀನಿವಾಸ್ ಬಜಾಲ್ ಹುತಾತ್ಮ ದಿನಾಚರಣೆ

ಮಂಗಳೂರು, ಜೂ.24: ದೇಶವನ್ನು ಆಳುವವರು ಬಹಳ ವ್ಯವಸ್ಥಿತವಾಗಿ ಸಂವಿಧಾನದ ಆಶಯವನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬುಡಮೇಲು ಮಾಡಲು ಹೊರಟಿದೆ. ಇಂತಹ ದೇಶವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಸಂವಿಧಾನದ ರಕ್ಷಣೆಗಾಗಿ, ಕೋಮು ಸೌಹಾರ್ದತೆಗಾಗಿ ಮತ್ತು ನವ ಸಮಾಜದ ನಿರ್ಮಾಣಕ್ಕಾಗಿ ನಡೆಯುವ ಹೋರಾಟದಲ್ಲಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟವರಲ್ಲಿ ಶ್ರೀನಿವಾಸ್ ಬಜಾಲ್ ಕೂಡ ಒಬ್ಬರು. ಅವರನ್ನು ದೈಹಿಕವಾಗಿ ಕೊಲ್ಲಲಾಗಿದ್ದರೂ ಅವರ ಆದರ್ಶವನ್ನು ಕೊಲ್ಲಲಾಗಿಲ್ಲ ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
18 ವರ್ಷದ ಹಿಂದೆ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಶ್ರೀನಿವಾಸ್ ಬಜಾಲ್ ರ ಹುತಾತ್ಮ ದಿನಾಚರಣೆಯ ಅಂಗವಾಗಿ ಪಕ್ಕಲಡ್ಕ ದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಮಿಕ ಮುಖಂಡ ಲೋಕೇಶ್ ಎಂ.ಧ್ವಜಾರೋಹಣಗೈದರು. ಡಿವೈಎಫ್‌ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಜ್, ನಾಗರಾಜ್ ಬಜಾಲ್, ವರಪ್ರಸಾದ್ ಕುಲಾಲ್, ಪ್ರಕಾಶ್ ಶೆಟ್ಟಿ, ಹರಿಹರನ್, ಅಖಿಲೇಶ್, ಸುರೇಶ್ ಬಜಾಲ್, ದೀಪಕ್ ಬೊಲ್‌ಲ್, ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.





