ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಗೆ ಸಿಪಿಎಂ ಖಂಡನೆ
ಮಂಗಳೂರು, ಜೂ. 24: ಕಳೆದ 11 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿರುತ್ತಲೇ ಇದೆ. ಇದರಿಂದ ಎಲ್ಲಾ ವಸ್ತುಗಳ ದರ ಕೂಡ ಏರಿಕೆಯಾಗುತ್ತಿವೆ. ಕೊರೋನ-ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿರುವ ಜನತೆಗೆ ಸಾಂತ್ವನ ಹೇಳಬೇಕಾದ ಸರಕಾರವು ತೈಲ ದರ ಏರಿಕೆಯನ್ನು ಮಾಡುತ್ತಲೇ ಇರುವುದು ತೀವ್ರ ಖಂಡನೀಯ ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 9.21 ರೂ. ಮತ್ತು ಡೀಸೆಲ್ ಬೆಲೆ 8.55 ರೂ. ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಶೇ.50ದಷ್ಟು ಇಳಿಕೆಯಾಗಿದ್ದರೂ ಕೇಂದ್ರ ಸರಕಾರದ ಮಧ್ಯ ಪ್ರವೇಶದಿಂದಾಗಿ ದೇಶದಲ್ಲಿ ತೈಲ ಬೆಲೆ ದಿನೇ ದಿನೇ ಏರಿಕೆ ಯಾಗುತ್ತಿದೆ. ತೈಲ ಕಂಪೆನಿಗಳ ಪರ ಕೇಂದ್ರ ಸರಕಾರದ ಲಾಬಿಯೇ ಇದಕ್ಕೆ ಕಾರಣವಾಗಿದೆ. ಕೂಡಲೇ ಏರಿಕೆಯಾದ ತೈಲ ದರವನ್ನು ವಾಪಸ್ ಪಡೆಯಬೇಕು ಹಾಗೂ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಸುಂಕವನ್ನು ಹಿಂತೆಗೆಯಬೇಕು ಎಂದು ಸಿಪಿಎಂ ಕಾರ್ಯದರ್ಶಿ ವಸಂತ ಆಚಾರಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
Next Story





