ರೈಲ್ವೆ ಇಂಜಿನ್ ಢಿಕ್ಕಿ: ಅಪರಿಚಿತ ಮೃತ್ಯು
ಕಾಪು, ಜೂ.24: ರೈಲ್ವೆ ಇಂಜಿನ್ ಢಿಕ್ಕಿ ಹೊಡೆದ ಪರಿಣಾಮ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜೂ.23ರಂದು ರಾತ್ರಿ ವೇಳೆ ನಡೆದಿದೆ.
ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈ ವ್ಯಕ್ತಿಗೆ ಚಲಿಸುತ್ತಿದ್ದ ರೈಲ್ವೆ ಇಂಜಿನ್ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಗಂಭೀರವಾಗಿ ಗಾಯ ಗೊಂಡ ಇವರು ಸ್ಥಳದಲ್ಲಿಯೇ ಮೃತಪಟ್ಟರು.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





