ವುಮೆನ್ ಇಂಡಿಯಾ ಮೂವ್ ಮೆಂಟ್ ವತಿಯಿಂದ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಮನವಿ

ಮಂಗಳೂರು : ಕೋವಿಡ್ - 19 ಕೊರೋನ ವೈರಸ್ ಲಾಕ್ ಡೌನ್ ನಿಂದಾಗಿ ಜನ ಸಾಮಾನ್ಯರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದು, ಲಾಕ್ ಡೌನ್ ಸಮಯದ ಎರಡು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕೆಂದು ವುಮೆನ್ ಇಂಡಿಯಾ ಮೂವ್ ಮೆಂಟ್ ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ದ.ಕ. ದ ವಿವಿಧ ಕ್ಷೇತ್ರ ಮೂಲಕ ಕರ್ನಾಟಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿಮ್ ಜಿಲ್ಲಾ ಸಮಿತಿ ಸದಸ್ಯರಾದ ಸಂಶಾದ್ ಕುಳಾಯಿ ನೇತೃತ್ವದಲ್ಲಿ, ಬಿ.ಸಿ.ರೋಡ್ ಝಹನಾ ಬಂಟ್ವಾಳ, ಪುತ್ತೂರಿನಲ್ಲಿ ಕೌನ್ಸಿಲರ್ ಝೊಹರಾ, ಮುಲ್ಕಿ ಮೂಡಬಿದ್ರೆಯಲ್ಲಿ ಆಯಿಶಾ ಬಜ್ಪೆ, ಬೆಳ್ತಂಗಡಿಯಲ್ಲಿ ಮರಿಯಮ್, ಸುಳ್ಯದಲ್ಲಿ ನಸ್ರಿಯಾ ಬೆಳ್ಳಾರೆ, ಮಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅಡ್ವೋಕೇಟ್ ರುಬಿಯಾ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
Next Story





