ದ.ಕೊರಿಯದಲ್ಲೂ ಕಡಿವಾಣವಿಲ್ಲದ ಕೊರೋನ: ಹೊಸ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ

ಸಿಯೋಲ್,ಜೂ.24: ದಕ್ಷಿಣ ಕೊರಿಯದಲ್ಲಿ ಕೊರೋನ ವೈರಸ್‌ನ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರತೊಡಗಿದ್ದು, ಕಳೆದ 24 ತಾಸುಗಳಲ್ಲಿ 51 ಪ್ರಕರಣಗಳು ವರದಿಯಾಗಿವೆ.
ದೇಶದಲ್ಲಿ ಪ್ರಸಕ್ತ ಒಟ್ಟು 12,535 ಸೋಂಕು ಪ್ರಕರಣಗಳು ವರದಿಯಾಗಿದ್ದು, 281 ಮಂದಿ ಸಾವನ್ನಪ್ಪಿದ್ದಾರೆಂದು ರೋಗ ನಿಯಂತ್ರಣ ಹಾಗೂ ತಡೆ ಕುರಿತ ಕೊರಿಯ ಕೇಂದ್ರವು ಬುಧವಾರ ಬಿಡುಗಡೆಗೊಳಿಸಿದ ಅಂಕಿಅಂಶಗಳು ತಿಳಿಸಿವೆ.
ಸೋಂಕಿತರ ಪೈಕಿ ಒಟ್ಟು 10,030 ಮಂದಿ ಗುಣಮುಖರಾಗಿದ್ದು, ಉಳಿದ 1324 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅದು ಹೇಳಿದೆ.
ಲಾಕ್‌ಡೌನ್ ಹಿಂತೆಗೆತದ ಬಳಿಕ ಸಾರ್ವಜನಿಕ ಚಟುವಟಿಕೆಗಳು ಅಧಿಕಗೊಂಡಿರುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವಿಕೆಯ ನಡವಳಿಕೆಗಳು ಸಡಿಲಗೊಂಡಿರುವಂತೆಯೇ, ಕಳೆದ ಎರಡು ದಿನಗಳಲ್ಲಿ ದಕ್ಷಿಣ ಕೊರಿಯದಲ್ಲಿ ಪ್ರತಿ ದಿನವೂ 40-50 ಹೊಸ ಪ್ರಕರಣಗಳು ವರದಿಯಾಗುತ್ತಿವೆ.
Next Story





