ಸಿದ್ದರಾಮಯ್ಯ ಸೇರಿ ಹಲವು 'ಕೈ' ನಾಯಕರಿಗೆ ಸಚಿವ ಸುಧಾಕರ್ ಕೃತಜ್ಞತೆ

ಬೆಂಗಳೂರು, ಜೂ.24: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಆರ್.ವಿ.ದೇಶಪಾಂಡೆ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ರಮೇಶ್ ಕುಮಾರ್ ಹಾಗೂ ಅನೇಕ ಕಾಂಗ್ರೆಸ್ ನಾಯಕರು ಫೋನ್ ಮೂಲಕ ನನ್ನ ಕುಟುಂಬ ಸದಸ್ಯರ ಯೋಗಕ್ಷೇಮ ವಿಚಾರಿಸಿ, ಆತ್ಮಸ್ಥೈರ್ಯವನ್ನು ತುಂಬಿದ್ದಾರೆ. ನಿಮಗೆಲ್ಲ ನನ್ನ ಕೃತಜ್ಞತೆಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
Next Story





