ಸುರಕ್ಷಿತ ಅಂತರ, ಮಾಸ್ಕ್ ಧರಿಸದವರಿಂದ 3.78 ಲಕ್ಷ ರೂ. ದಂಡ ಸಂಗ್ರಹ
ಬೆಂಗಳೂರು, ಜೂ.24: ಕೊರೋನ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿ, ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವವರಿಂದ ದಂಡ ವಸೂಲಿ ಮಾಡುತ್ತಿದ್ದು, ಈ ಪೈಕಿ 3.78 ಲಕ್ಷ ರೂ.ದಂಡ ಸಂಗ್ರಹಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದ ಹಾಗೂ ಮುಖಗವಸು(ಮಾಸ್ಕ್) ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಅಡ್ಡಾಡುವವರಿಗೆ ಮಾರ್ಷಲ್‍ಗಳು ದಂಡ ಸಂಗ್ರಹಿಸುತ್ತಿದ್ದು, ಬುಧವಾರ ಮಾಸ್ಕ್ ಧರಿಸದ 1,824 ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳದ 69 ಮಂದಿ ಸೇರಿದಂತೆ 1,893 ಮಂದಿಯಿಂದ ಒಟ್ಟು 3.78 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
Next Story





