ಪ್ರತಿಷ್ಠಿತ ಕಂಪೆನಿ ಹೆಸರಿನಲ್ಲಿ ನಕಲಿ ಮಾಸ್ಕ್ ಮಾರಾಟ ಆರೋಪ: ಮೂವರ ಬಂಧನ
![ಪ್ರತಿಷ್ಠಿತ ಕಂಪೆನಿ ಹೆಸರಿನಲ್ಲಿ ನಕಲಿ ಮಾಸ್ಕ್ ಮಾರಾಟ ಆರೋಪ: ಮೂವರ ಬಂಧನ ಪ್ರತಿಷ್ಠಿತ ಕಂಪೆನಿ ಹೆಸರಿನಲ್ಲಿ ನಕಲಿ ಮಾಸ್ಕ್ ಮಾರಾಟ ಆರೋಪ: ಮೂವರ ಬಂಧನ](https://www.varthabharati.in/sites/default/files/images/articles/2020/06/25/248665-1593090638.jpg)
ಬೆಂಗಳೂರು, ಜೂ.25: ಪ್ರತಿಷ್ಠಿತ ಕಂಪೆನಿ ಹೆಸರಿನ ನಕಲಿ ಮಾಸ್ಕ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಇಲ್ಲಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ನಗರದ ನಿವಾಸಿಗಳಾದ ರವಿ, ನಾರಾಯಣ ಸ್ವಾಮಿ, ಪಾರ್ವತೇಶ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಷ್ಠಿತ ವೈಲ್ಡ್ ಕ್ರಾಫ್ಟ್ ಕಂಪೆನಿಯ ಹೆಸರಿನಲ್ಲಿ ನಕಲಿ ಮಾಸ್ಕ್ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನಾಧರಿಸಿ ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ ನಕಲಿ ಲೇಬಲ್ಗಳನ್ನು ಅಂಟಿಸಿರುವ ಮಾಸ್ಕ್ ಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ.
Next Story