ಕಾರು- ಬೈಕ್ ನಡುವೆ ಅಪಘಾತ: ಎರಡು ತಿಂಗಳ ಮಗು ಸೇರಿ ಇಬ್ಬರು ಸಾವು
ದಾವಣಗೆರೆ, ಜೂ. 25: ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಎರಡು ತಿಂಗಳು ಹೆಣ್ಣು ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಬಳಿಯ ನುಗ್ಗಿಹಳ್ಳಿ ಕ್ರಾಸ್ ಬಳಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿಯ ಮನ್ವಿತಾ (2 ತಿಂಗಳು), ಚಂದ್ರಮ್ಮ ಶ್ರೀನಿವಾಸ ಆಚಾರ್ಯ (70) ಸಾವನ್ನಪ್ಪಿದವರು.
ಸಂತೆಬೆನ್ನೂರು ಬಳಿಯ ನುಗ್ಗಿಹಳ್ಳಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಎರಡು ತಿಂಗಳ ಹೆಣ್ಣು ಮಗು ಹಾಗೂ ವೃದ್ಧೆ ಚಂದ್ರಮ್ಮ ಸಾವನ್ನಪ್ಪಿದ್ದಾರೆ. ಮಗುವಿನ ತಂದೆ-ತಾಯಿಗೆ ಗಾಯಗಳಾಗಿವೆ.
ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story