ಗುರುವಿನ ಉಪಗ್ರಹ ಯುರೋಪಾದ ಸಾಗರ ವಾಸಯೋಗ್ಯ: ನೂತನ ಅಧ್ಯಯನದಲ್ಲಿ ಬಹಿರಂಗ
ವಾಶಿಂಗ್ಟನ್, ಜೂ. 25: ಸೌರಮಂಡಲದ ಅತಿ ದೊಡ್ಡ ಗ್ರಹವಾಗಿರುವ ಗುರುವಿನ ಉಪಗ್ರಹ ಯುರೋಪಾದ ಭೂಗತ ಸಾಗರವು ಹಿಂದೆ ಸೂಕ್ಷ್ಮಾಣು ಜೀವಿಗಳ ವಾಸಕ್ಕೆ ಪೂರಕವಾಗಿದ್ದಿರಬಹುದಾದ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಿಮದ ದಪ್ಪನೆ ಪದರದ ಅಡಿಯಲ್ಲಿ ಇರುವ ಸಾಗರವು ಹೇಗೆ ರೂಪುಗೊಂಡಿರಬಹುದು ಎಂಬುದನ್ನೂ ಅವರು ಕಂಡುಕೊಂಡಿದ್ದಾರೆ.
ಯುರೋಪಾದಲ್ಲಿ ಜೀವಿಗಳು ವಾಸಿಸುವ ಸಾಧ್ಯತೆ ಬಗ್ಗೆ ಹಿಂದಿನಿಂದಲೂ ಊಹಾಪೋಹಗಳು ನಡೆಯುತ್ತಾ ಬಂದಿವೆ.
ಯುರೋಪಾದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದಿರಬಹುದಾದ ಸಾಧ್ಯತೆಯತ್ತ ಬುಧವಾರ ಬಹಿರಂಗಪಡಿಸಲಾದ ನೂತನ ಅಧ್ಯಯನವೊಂದು ಬೆಟ್ಟು ಮಾಡಿದೆ. ಪ್ರಾಚೀನ ಕಾಲದಲ್ಲಿ, ಉಪಗ್ರಹದಲ್ಲಿದ್ದ ಜಲ-ಸಮೃದ್ಧ ಖನಿಜಗಳು ವಿಕಿರಣಶೀಲ ವಸ್ತುಗಳ ಉರಿಯುವಿಕೆಯಿಂದಾಗಿ ಉಂಟಾದ ಶಾಖದಿಂದಾಗಿ ನೀರನ್ನು ಹೊರಬಿಟ್ಟಿರಬಹುದಾಗಿದೆ ಹಾಗೂ ಆ ಮೂಲಕ ಅತ್ಯಂತ ಬೃಹತ್ ಸಾಗರ ನಿರ್ಮಾಣವಾಗಿದೆ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.
Next Story





