ಸಂಚಾರಿ ಠಾಣೆಯ ಹೆಡ್‍ಕಾನ್ಸ್ ಟೇಬಲ್ ಗೆ ಕೊರೋನ: ಮದ್ದೂರು ಪೊಲೀಸ್ ಠಾಣೆ ಸೀಲ್‍ಡೌನ್
ಮಂಡ್ಯ, ಜೂ.25: ಮದ್ದೂರಿನ ಸಂಚಾರಿ ಪೊಲೀಸ್ ಠಾಣೆಯ ಹೆಡ್‍ಕಾನ್ಸ್ ಟೇಬಲ್ ಒಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮದ್ದೂರು ಸಂಚಾರಿ, ಮದ್ದೂರು ಪೊಲೀಸ್ ಠಾಣೆ, ಸಿಪಿಐ ಕಚೇರಿ ಮತ್ತು ಪೊಲೀಸ್ ಕ್ವಾರ್ಟಸ್‍ನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.
ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮತ್ತು ಮದ್ದೂರು ಠಾಣೆ ಹಾಗೂ ಮದ್ದೂರು ಸಿಪಿಐ ಕಚೇರಿಗಳು ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಇರುವ ಪೊಲೀಸ್ ವಸತಿ ಗೃಹಗಳಲ್ಲಿ ಕಾರ್ಯನಿರ್ವಹಿಸುತ್ತವೆ. ತುರ್ತು ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ತಿಳಿಸಿದ್ದಾರೆ.
Next Story





