ಎಚ್-1ಬಿ ವೀಸಾ ರದ್ದು ದೂರದೃಷ್ಟಿಯಿಲ್ಲದ ನಿರ್ಧಾರ: ಹಾರ್ವರ್ಡ್ ವಿಶ್ವವಿದ್ಯಾನಿಲಯ

ವಾಶಿಂಗ್ಟನ್, ಜೂ. 26: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಭಾರೀ ಜನಪ್ರಿಯವಾಗಿರುವ ಎಚ್-1ಬಿ ವೀಸಾ ಸೇರಿದಂತೆ ವಿದೇಶಿ ಉದ್ಯೋಗ ವೀಸಾಗಳನ್ನು ಈ ವರ್ಷದ ಕೊನೆಯವರೆಗೆ ತಡೆಹಿಡಿದಿರುವುದು ದೂರದೃಷ್ಟಿಯಿಲ್ಲದ ನೀತಿಯಾಗಿದೆ ಹಾಗೂ ಅದು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಬೆದರಿಕೆಯಾಗಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯ ಹೇಳಿದೆ.
ಇದು ವಿದ್ಯಾರ್ಥಿ ವೀಸಾಗಳು ಅಥವಾ ಆಪ್ಶನಲ್ ಪ್ರಾಕ್ಟಿಕಲ್ ಟ್ರೇನಿಂಗ್ (ಒಪಿಟಿ) ಮೇಲೆ ಪರಿಣಾಮ ಬೀರುವುದಿಲ್ಲವಾದರೂ, ಎಚ್-1ಬಿ ಸೇರಿದಂತೆ ನೂತನ ವಲಸೆಯೇತರ ವೀಸಾದಾರರ ಪ್ರವೇಶವನ್ನು ತಡೆಯುವುದು ನಿರಾಶಾದಾಯಕವಾಗಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಕ್ತಾರ ಜೊನಾಥನ್ ಎಲ್. ಸ್ಪೇನ್ ಗುರುವಾರ ಹೇಳಿದರು.
ಮಹತ್ವದ ಚುನಾವಣಾ ವರ್ಷದಲ್ಲಿ ಅಮೆರಿಕನ್ನರ ಉದ್ಯೋಗಗಳನ್ನು ರಕ್ಷಿಸುವುದಕ್ಕಾಗಿ ಎಚ್-1ಬಿ ಸೇರಿದಂತೆ ಹಲವಾರು ನೂತನ ಉದ್ಯೋಗ ವೀಸಾಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಈ ವರ್ಷದ ಕೊನೆಯವರೆಗೆ ಅಮಾನತಿನಲ್ಲಿಡುವ ಆದೇಶವನ್ನು ಹೊರಡಿಸಿದ್ದಾರೆ.
Next Story





