ಬೆಂಗಳೂರು: 144 ಹೊಸ ಕೊರೋನ ಪ್ರಕರಣಗಳು ದೃಢ, ಮೂವರು ಸಾವು

ಬೆಂಗಳೂರು, ಜೂ.26: ನಗರದಲ್ಲಿ ಶುಕ್ರವಾರ ಹೊಸದಾಗಿ 144 ಪ್ರಕರಣ ದೃಢಪಟ್ಟಿದ್ದು, ಕೊರೋನ ಸೋಂಕಿತರ ಸಂಖ್ಯೆ 1,935ಕ್ಕೆ ಏರಿಕೆಯಾಗಿದೆ.
ಶುಕ್ರವಾರ ಮೂರು ಜನರು ಮೃತರಾಗಿದ್ದು, 123 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 1,327 ಜನರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 81 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಶುಕ್ರವಾರ 21 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯಲ್ಲಿ ಒಟ್ಟು 16,450 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ. ನಗರದಲ್ಲಿ ಮೂವರು ಕೊರೋನ ಸೋಂಕಿತರು ಮೃತರಾಗಿದ್ದು, ಇಲ್ಲಿಯವರೆಗೆ 81 ಜನರು ಮೃತರಾಗಿದ್ದಾರೆ. ತಮಿಳುನಾಡಿನಿಂದ 51 ವರ್ಷದ ವ್ಯಕ್ತಿ ಹಾಗೂ ದುಬೈನಿಂದ ಬಂದಿರುವ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ನಗರದ ಕಂಟೈನ್ಮೆಂಟ್ ವಲಯಗಳು ಮತ್ತು ಸೀಲ್‍ಡೌನ್ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ.
Next Story





