ಆರ್ಥಿಕ ಇಲಾಖೆ: ಶೇ.50ರಷ್ಟು ಸಿಬ್ಬಂದಿ ದಿನ ಬಿಟ್ಟು ದಿನ ಕೆಲಸ ನಿರ್ವಹಿಸಲು ಸೂಚನೆ
ಬೆಂಗಳೂರು, ಜೂ. 26: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಶೇ.50ರಷ್ಟು ದಿನ ಬಿಟ್ಟು ದಿನ ವ್ಯಕ್ತಿಗತ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸಲು ಆರ್ಥಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಜಿ.ಎಸ್. ಮಂಗಳ ಆದೇಶ ಹೊರಡಿಸಿದ್ದಾರೆ.
ಸರಕಾರದ ಅಧೀನ ಕಾರ್ಯದರ್ಶಿಯನ್ನೊಳಗೊಂಡಂತೆ ಶೇ.50ರಷ್ಟು ಅಧಿಕಾರಿ/ನೌಕರರು ಹಾಜರಾಗಬೇಕು ಹಾಗೂ ಎಲ್ಲ ಸಂದರ್ಭದಲ್ಲೂ ಮೇಲಾಧಿಕಾರಿಗಳ ಕರೆಯ ಮೇರೆಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಷರತ್ತಿಗೊಳಪಡಿಸಿ ಆಯಾ ಶಾಖೆಗಳು ಈಗಾಗಲೇ ಒದಗಿಸಿರುವ ಪಟ್ಟಿಯಂತೆ ಮುಂದಿನ ಆದೇಶದವರೆಗೆ ದಿನಬಿಟ್ಟು ದಿನ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
Next Story





