ಕೋವಿಡ್-19: ಬೆಂಗಳೂರು ಅಸಾಧಾರಣ ಸಾಧನೆ ತೋರಿದೆ- ಸಚಿವ ಸುಧಾಕರ್

ಬೆಂಗಳೂರು, ಜೂ.26: ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ. ಜೂ.25ರಂತೆ, ಭಾರತದ ಐದು ದೊಡ್ಡ ಜನಸಂಖ್ಯೆ ನಗರಗಳಲ್ಲಿ 1,92,500 ಕೋವಿಡ್ ಪ್ರಕರಣಗಳು, 7417 ಸಾವು ಸಂಭವಿಸಿವೆ. 1798 ಪ್ರಕರಣಗಳು ಮತ್ತು 78 ಸಾವುಗಳೊಂದಿಗೆ ಬೆಂಗಳೂರಿನಲ್ಲಿ, ಒಟ್ಟು ಟಾಪ್ 5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ, ಕೇವಲ ಶೇ.0.9 ಮತ್ತು ಶೇ.1ರಷ್ಟು ಸಾವು ಸಂಭವಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
Next Story





