ಮಹಾರಾಷ್ಟ್ರ:ಬಜಾಜ್ ಘಟಕದ 140 ಮಂದಿಗೆ ಕೋವಿಡ್-19 ಸೋಂಕು

ಮುಂಬೈ,ಜೂ.27: ಮಹಾರಾಷ್ಟ್ರದ ಔರಂಗಾಬಾದ್‌ನ ವಾಹುಜ್‌ನಲ್ಲಿರುವ ಘಟಕದಲ್ಲಿನ 140 ಮಂದಿ ನೌಕರರರಿಗೆ ಕೋವಿಡ್-19 ಸೋಂಕು ತಗಲಿದೆ ಎಂದು ಬಜಾಜ್ ಆಟೊ ಕಂಪೆನಿ ಶುಕ್ರವಾರ ತಿಳಿಸಿದೆ.
ಈ ಘಟಕದಲ್ಲಿ 8,100ಕ್ಕೂ ಅಧಿಕ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿನಿಂದಾಗಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ.
ಔರಂಗಾಬಾದ್ ಘಟಕದಲ್ಲಿಇದೀಗ 140 ಸೋಂಕು ಪ್ರಕರಣ ಪತ್ತೆಯಾಗಿದೆ. ಇದು ನಮ್ಮಲ್ಲಿರುವ ಸಿಬ್ಬಂದಿಯ ಶೇ.2ಕ್ಕಿಂತಲೂ ಕಡಿಮೆ. ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಹಿನ್ನೆಲೆ ಇರುವ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಕಂಪೆನಿಯ ಸಿಎಚ್‌ಆರ್‌ಒ ರವಿ ಕಿರಣ್ ರಾಮಸ್ವಾಮಿ ತಿಳಿಸಿದ್ದಾರೆ.
ಘಟಕವನ್ನು ಎರಡು ದಿನಗಳ ಕಾಲ ಮುಚ್ಚಲಾಗಿದೆ ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Next Story