ಡಿಎಂಕೆಯ ಮತ್ತೊಬ್ಬ ಶಾಸಕನಿಗೆ ಕೋವಿಡ್-19 ಸೋಂಕು

ಚೆನ್ನೈ, ಜೂ.27: ಚೆಯ್ಯೂರು ವಿಧಾನಸಭೆ ಕ್ಷೇತ್ರದ ಡಿಎಂಕೆ ಶಾಸಕ ಆರ್.ಟಿ. ಅರಸುವಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಅನ್ಬಳಗನ್ ಹಾಗೂ ವಸಂತಂ ಕೆ.ಕಾರ್ತಿಕೇಯನ್ ಬಳಿಕ ಕೋವಿಡ್-19 ಸೋಂಕಿಗೆ ತುತ್ತಾದ ಡಿಎಂಕೆಯ ಮೂರನೇ ಶಾಸಕ ಇವರಾಗಿದ್ದಾರೆ.
ತಮಿಳುನಾಡಿನಲ್ಲಿ ಶುಕ್ರವಾರ 3,645 ಹೊಸ ಕೊರೋನ ವೈರಸ್ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 74,622 ಪ್ರಕರಣಗಳು ಪತ್ತೆಯಾದಂತಾಗಿದೆ. ಚೆನ್ನೈನಲ್ಲಿ ಒಟ್ಟು 1,956 ಪ್ರಕರಣಗಳು ವರದಿಯಾಗಿವೆೆ. ಈ ಮೂಲಕ ಇಲ್ಲಿ ಒಟ್ಟು ಸೋಂಕಿತರ ಸಂಖ್ಯೆ 49,690ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 46 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು 957 ಜನರು ಸಾವನ್ನಪ್ಪಿದ್ದಾರೆ.
Next Story