ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ನೇಮಕದಲ್ಲಿ ಅನ್ಯಾಯ: ಹರೀಶ್ ಕಿಣಿ
ಉಡುಪಿ, ಜೂ.27: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರ ನೇಮ ಕಾತಿಯಲ್ಲಿ ಕಾಪು ಕ್ಷೇತ್ರದ ಗ್ರಾಮಗಳಾದ ಉದ್ಯಾವರ, ಕೊರಂಗ್ರಪಾಡಿ, ಅಲೆ ವೂರು, 80 ಬಡಗಬೆಟ್ಟು ಗ್ರಾಮಗಳ ಯಾವುದೇ ಒಬ್ಬರನ್ನು ಕೂಡ ಸದಸ್ಯ ರನ್ನಾಗಿ ನೇಮಿಸದೆ ರಾಜ್ಯ ಬಿಜೆಪಿ ಸಪಕಾರ ಆ ಭಾಗದ ಜನರಿಗೆ ಅನ್ಯಾಯ ಎಸಗಿದೆ ಎಂದು ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಕಿಣಿ ಆರೋಪಿಸಿದ್ದಾರೆ.
ಇದು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್.ಮೆಂಡನ್ ಅವರ ಈ ಭಾಗದ ಜನರ ಮತ್ತು ಅಭಿವೃದ್ದಿ ಕುರಿತ ನಿರ್ಲಕ್ಷ ಹಾಗೂ ವೈಫಲ್ಯವನ್ನು ತೋರಿಸುತ್ತದೆ. ಈ ಭಾಗದಿಂದ ಸಾಕಷ್ಟು ಆದಾಯ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಪ್ರಾಧಿಕಾರಕ್ಕೆ ಸಂದಾಯ ಆಗುತ್ತಿದೆ. ಈ ಹಿಂದಿನ ಎಲ್ಲ ನೇಮಕಾತಿಗಳಲ್ಲಿ ಈ ಭಾಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯರನ್ನಾಗಿ, ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಯಾವುದೇ ಸದಸ್ಯರನ್ನು ನೇಮಕಗೊಳಿಸ ದಿರುವುದರಿಂದ ಅಭಿವೃದ್ಧಿಗೆ ಹಿನ್ನೆಡೆ ಆಗುವ ಸಾಧ್ಯತೆ ಇದೆ. ಆದುದರಿಂದ ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





