ಹಿದಾಯತ್ ನಗರ ಮಸೀದಿಗೆ ಪದಾಧಿಕಾರಿಗಳ ಆಯ್ಕೆ
ಕೋಟೆಕಾರ್, ಜೂ.7: ಇಲ್ಲಿನ ಹಿದಾಯತ್ ನಗರದ ಅಲ್ ಹಿದಾಯ ಜುಮಾ ಮಸ್ಜಿದ್ನ 2020-21ನೇ ಮಹಾಸಭೆಯು ಇತ್ತೀಚೆಗೆ ಮದ್ರಸ ಹಾಲ್ ನಲ್ಲಿ ಜರುಗಿತು.
ಅಬ್ದುಲ್ ಅಝೀಝ್ ಸಖಾಫಿಯ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಮೊಯಿದಿನ್ ಕುಟ್ಟಿ, ಉಪಾಧ್ಯಕ್ಷರಾಗಿ ಮುಹಮ್ಮದಲಿ, ಪ್ರಧಾನ ಕಾರ್ಯದರ್ಶಿಯಾಗಿ ಜಾಬಿರ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಸ್ಸಲಾಂ ತೌಫೀಕ್, ಕೋಶಾಧಿಕಾರಿಯಾಗಿ ಮುನೀರ್ ಎಸ್ಎಚ್ ಹಾಗೂ 17 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ಕೆ.ಪಿ.ಹುಸೈನ್ ಸಆದಿ ಕೆಸಿ ರೋಡ್ ಆನ್ಲೈನ್ ಉಪದೇಶ ನೀಡಿದರು. ಎನ್ಎಸ್ ಉಮರ್ ಮಾಸ್ಟರ್, ರಿಯಾಝ್ ಅಂಗಡಿ ಉಪಸ್ಥಿತರಿದ್ದರು. ರಾಝಿನ್ ಸ್ವಾಗತಿಸಿದರು. ಜಾಬಿರ್ ವಂದಿಸಿದರು.
Next Story