ಲ್ಯಾಂಡ್ ಮಾರ್ಕ್ ಇನ್ಫ್ರಾಟೆಕ್ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ 1 ಸಾವಿರ ಎನ್-95 ಮಾಸ್ಕ್ ವಿತರಣೆ
ಮಂಗಳೂರು : ನಗರದ ಲ್ಯಾಂಡ್ ಮಾರ್ಕ್ ಇನ್ಫ್ರಾಟೆಕ್ ಇದರ ವ್ಯವಸ್ಥಾಪಕ ನಿರ್ದೇಶಕ ಜಿ. ಶಬೀರ್ ಮತ್ತು ಅವರ ಪುತ್ರ ಮುಹಮ್ಮದ್ ಶಾಹಿಲ್ ವತಿಯಿಂದ ಉದ್ಯಮಿ ಜಯ ಶೆಟ್ಟಿ ಎಕ್ಕೂರು ನೇತೃತ್ವದಲ್ಲಿ ವೆನ್ಲಾಕ್ ಆಸ್ಪತ್ರೆ, ಸಿಬ್ಬಂದಿ ಹಾಗೂ ಕೊರೋನ ಯೋಧರ ಉಪಯೋಗಕ್ಕಾಗಿ ಒಂದು ಸಾವಿರ ಎನ್-95 ಮಾಸ್ಕ್ ಗಳನ್ನು ನೀಡಲಾಯಿತು.
ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ. ಸದಾಶಿವ ಅವರಿಗೆ ಮಾಸ್ಕ್ ಗಳನ್ನು ಹಸ್ತಾಂತರಿಸಲಾಯಿತು. ಡಾ ಜೂಲಿಯನ್ ಎ.ಎಫ್. ಸಲ್ಡಾನ, ಡಾ. ಜೆಸಿಂತ ಡಿಸೋಜ, ಶಫೀವುಲ್ಲಾ ಮತ್ತು ಆಶಾಲತಾ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.
Next Story