ಅಪಹರಿಸಿ, ಆನ್‍ಲೈನ್ ಮೂಲಕ ಹಣ ವಸೂಲಿ: ಪ್ರಕರಣ ದಾಖಲು

ಬೆಂಗಳೂರು, ಜೂ.28: ವ್ಯಕ್ತಿಯೋರ್ವನನ್ನು ಅಪಹರಿಸಿ, ಆನ್‍ಲೈನ್ ಮೂಲಕ ಹಣ ವಸೂಲಿ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ತಾಪನ್ ಕುಮಾರ್(31) ಎಂಬುವರನ್ನು ಅಪಹರಿಸಿದ್ದರು ಎಂದು ತಿಳಿದುಬಂದಿದೆ.
ಜೂ.19ರ ರಾತ್ರಿ 10 ಗಂಟೆಗೆ ಕಚೇರಿಯಿಂದ ಮನೆಗೆ ಖಾಸಗಿ ಕಾರಿನಲ್ಲಿ ತಾಪನ್ ಕುಮಾರ್ ತೆರಳಿದ್ದು, ಈ ವೇಳೆ ಕಾರಿನಲ್ಲಿದ್ದ ಚಾಲಕ ಸೇರಿ ಮೂವರು, ತಾಪನ್ ಅನ್ನು ಅಪಹರಿಸಿದ್ದಾರೆ. ತದನಂತರ, ಇವರ ಪತ್ನಿಗೆ ಮೊಬೈಲ್ ಮೂಲಕ ಕರೆ ಮಾಡಿ ಆನ್ ಲೈನ್ ಮೂಲಕ ಹಣ ನೀಡುವಂತೆ ಬೆದರಿಕೆ ಹಾಕಿ 21 ಸಾವಿರ ರೂ. ವಸೂಲಿ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಕಾಡುಗೋಡಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





