ದುಬೈ: ಕೆ.ಎಸ್.ಸಿ.ಸಿ ವತಿಯಿಂದ ರಕ್ತದಾನ ಶಿಬಿರ

ದುಬೈ: ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ವತಿಯಿಂದ ದುಬೈ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಅಲ್ ವಸಲ್ ಕ್ಲಬ್ ನಲ್ಲಿ ಬೃಹತ್ ರಕ್ತದಾನ ಶಿಬಿರವು ಜೂ. 26ರಂದು ನಡೆಯಿತು.
ರಕ್ತದಾನ ಶಿಬಿರದಲ್ಲಿ ಸುಮಾರು 60 ರಷ್ಟು ರಕ್ತದಾನಿಗಳು ರಕ್ತದಾನ ಮಾಡಿದರು. ಪ್ರಸಕ್ತ ಸಾಂಕ್ರಾಮಿಕ ಕೊರೋನ ರೋಗವು ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಪ್ರತಿಯೊಬ್ಬರೂ ಸುರಕ್ಷಿತ ಅಂತರ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಶಿಬಿರದಲ್ಲಿ ಭಾಗವಹಿಸಿದ್ದರು.
ರಕ್ತದಾನ ಮಾಡುವುದರಿಂದ ತುರ್ತು ಅಗತ್ಯ ಇರುವ ರೋಗಿಗಳಿಗೆ ಅನುಕೂಲವಾಗಲಿದ್ದು ಅಮೂಲ್ಯ ಜೀವ ಉಳಿಸಲು ನೆರವಾಗುತ್ತದೆ ಮತ್ತು ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ ರಕ್ತದಾನ ಮಾಡಿದ ದಾನಿಗಳ ಕಾರ್ಯವನ್ನು ಕೆ ಎಸ್ ಸಿ ಸಿ ಮ್ಯಾನೇಜರ್ ಮುಹಮ್ಮದ್ ಶಾಫಿ ಮುಕ್ಕ ಶ್ಲಾಘಿಸಿದರು.
ರಕ್ತದಾನ ಶಿಬಿರಕ್ಕೆ ಅವಕಾಶ ಮಾಡಿಕೊಟ್ಟ ಕಮ್ಯುನಿಟಿ ಡೆವೆಲಪ್ಮೆಂಟ್ ಅಥಾರಿಟಿ (ಸಿ ಡಿ ಎ ) ಹಾಗು ದುಬೈ ಹೆಲ್ತ್ ಅಥಾರಿಟಿ (ಡಿ ಎಚ್ ಎ ) ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು. ಕೆ ಎಸ್ ಸಿ ಸಿ ಯ ಸ್ವಯಂ ಸೇವಕರು ರಕ್ತದಾನ ಶಿಬಿರ ನಡೆಸಲು ಸಹಕರಿಸಿದರು. ಈ ಸಂದರ್ಭದಲ್ಲಿ ಕೆ ಎಸ್ ಸಿ ಸಿ ಯ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.







.jpeg)
.jpeg)
.jpeg)



