ಕ್ಯಾಲಿಫೋರ್ನಿಯ: ವಾಲ್ ಮಾರ್ಟ್ ನಲ್ಲಿ ಗುಂಡು ಹಾರಾಟ; 2 ಸಾವು
ಕ್ಯಾಲಿಫೋರ್ನಿಯ (ಅಮೆರಿಕ), ಜೂ. 28: ಕ್ಯಾಲಿಫೋರ್ನಿಯದ ರೆಡ್ ಬ್ಲಫ್ ನಲ್ಲಿರುವ ವಾಲ್ ಮಾರ್ಟ್ ವಾಣಿಜ್ಯ ಮಳಿಗೆಯ ವಿತರಣಾ ಕೇಂದ್ರವೊಂದರಲ್ಲಿ ಶನಿವಾರ ನಡೆದ ಗುಂಡು ಹಾರಾಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಕ್ರಮಣಕಾರ ಕೇಂದ್ರದ ಪಾರ್ಕಿಂಗ್ ಸ್ಥಳಕ್ಕೆ ನಾಲ್ಕು ಸುತ್ತು ಬಂದನು ಹಾಗೂ ಬಳಿಕ ತನ್ನ ವಾಹನವನ್ನು ಕಟ್ಟಡಕ್ಕೆ ಢಿಕ್ಕಿ ಹೊಡೆಸಿದನು ಮತ್ತು ತನ್ನ ಸೆಮಿ-ಆಟೊಮ್ಯಾಟಿಕ್ ಬಂದೂಕಿನಿಂದ ಗುಂಡು ಹಾರಿಸಿದನು ಎಂದು ಟೆಹಾಮ ಕೌಂಟಿಯ ಸಹಾಯಕ ಶೆರೀಫ್ ಹೇಳಿದರು.
ಬಂದೂಕುಧಾರಿಯು ಅಲ್ಲಿನ ಉದ್ಯೋಗಿಯೋರ್ವನನ್ನು ಕೊಂದನು. ಬಳಿಕ ಅಲ್ಲಿಗೆ ಬಂದ ಪೊಲೀಸರು ಬಂದೂಕುಧಾರಿಯನ್ನು ಗುಂಡಿಟ್ಟು ಸಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story