ಕೊಣಾಜೆ: ಕಾರು ಢಿಕ್ಕಿಯಾಗಿ ಮೂರು ವರ್ಷದ ಮಗು ಮೃತ್ಯು
ಕೊಣಾಜೆ: ಕೊಣಾಜೆ ಸಮೀಪದ ನಡುಪದವು ಬಳಿ ಕಾರಿನಡಿಗೆ ಬಿದ್ದು ಮೂರು ವರ್ಷದ ಮಗುವೊಂದು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ನಡುಪದವಿನ ಫಾರೂಕ್ ಎಂಬವರ ಮೂರು ವರ್ಷದ ಮಗು ಹೆಸರು ಫಾಹಿಮಾ ಎಂದು ಗುರುತಿಸಲಾಗಿದೆ.
ನಡುಪದವಿನ ವ್ಯಕ್ತಿಯೊಬ್ಬರು ಕಾರಿನಲ್ಲಿ ಒಳ ರಸ್ತೆಯ ಮೂಲಕ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಅಲ್ಲೇ ಸಮೀಪದ ಮನೆಯ ಮಗುವೊಂದು ಏಕಾಏಕಿ ರಸ್ತೆಗೆ ಬಂದಾಗ ಮಗು ಕಾರಿನಡಿಗೆ ಬಿದ್ದು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
Next Story